ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದಿದ್ದು ಬಿಜೆಪಿಯಿಂದ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ಹೆಚ್.ಡಿ ಕುಮಾರಸ್ವಾಮಿ ಜೊತೆಗಿನ ಚರ್ಚೆ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಣ್ಣ ಅವರು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ನಾನು ಆಸ್ಪತ್ರೆಗೆ ಆಗೋಕೆ ಆಗಿರಲಿಲ್ಲ. ಹೀಗಾಗಿ, ಅವರ ಆರೋಗ್ಯ ವಿಚಾರಿಸಲು ಆಗಿರಲಿಲ್ಲ, ಅದಕ್ಕೆ ಬಂದಿದ್ದೆ..’ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ಮೈತ್ರಿ ಮಾತುಕತೆ ಸದ್ಯ ಕೇಂದ್ರ ಮಟ್ಟದಲ್ಲಿ ಇದೆ. ಅದರ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ ಎನ್ನುವ ಮೂಲಕ ಈಶ್ವರಪ್ಪ ಮೈತ್ರಿ ಗುಟ್ಟು ಬಿಟ್ಟುಕೊಡಲಿಲ್ಲ. ಜಾತ್ಯತೀತ ಬರಿ ಅಧಿಕಾರಕ್ಕೆ ಮಾತ್ರನಾ? ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ ಈಶ್ವರಪ್ಪ, ಈ ಮೊದಲು ಸಹ ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದಿದ್ದು ಬಿಜೆಪಿಯಿಂದ. ಹೀಗಾಗಿ, ರಾಮಕೃಷ್ಣ ಹೆಗಡೆ ಸಿಎಂ ಆದರು. ಸಿದ್ದರಾಮಯ್ಯ ಸಹ ಮೊದಲು ಗೂಟದ ಕಾರು ನೋಡಿದ್ದು ಆಗಲೇ. ಆಗ ಅವರಿಗೆ ಬಿಜೆಪಿ ಕೋಮುವಾದ ಆಗಿರಲಿಲ್ಲ ಎಂದು ಚಾಟಿ ಬೀಸಿದರು.