ಸಿದ್ದರಾಮಯ್ಯ ಅವರನ್ನು ಎರಡು ರೂಪದಲ್ಲಿ ನಾನು ನೋಡಿರುವೆ: ಬಸವರಾಜ ಬೊಮ್ಮಾಯಿ

ಬಳ್ಳಾರಿ: ಕರ್ನಾಟಕದಲ್ಲಿ 4 ತಿಂಗಳ ಆಡಳಿತ ನೋಡಿದರೆ ಗೊತ್ತಾಗುತ್ತದೆ, ಎಲ್ಲರೂ ಸೇರಿ ಕಾಂಗ್ರೆಸ್ ವಿರೋಧ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಮೈತ್ರಿ (Alliance) ಮಾಡಿಕೊಳ್ಳಲು ಮುಂದಾಗಿದ್ದೇವೆ. ಆದರೆ ಮೈತ್ರಿ ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು ಮೈತ್ರಿ ವಿಚಾರವಾಗಿ ಕುಮಾರಸ್ವಾಮಿ ಹೇಳಿಕೆ ಗಮನಿಸಿದರೆ, ಈ ಕುರಿತು ಚೆರ್ಚೆ ಆಗಬೇಕು. ಮೈತ್ರಿ ಮಾಡಿಕೊಳ್ಳುವ ವಿಚಾರ ಸುದೀರ್ಘ ಚೆರ್ಚೆ ಆಗಬೇಕು. ಬಳಿಕ ಮಾತ್ರವೇ ಅಂತಿಮ ಹಂತದ ನಿರ್ಧಾರ ಆಗಲಿದೆ ಎಂದಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ಕೀಲು ಗೊಂಬೆಯಾಗಿದ್ದಾರೆ. 2013 ರಲ್ಲಿ ಒಂದು ರೀತಿಯಲ್ಲಿ ಇದ್ದರು,

ಈಗ ಇರುವ ಸಿದ್ದರಾಮಯ್ಯ ಬೇರೆ. ಸಿದ್ದರಾಮಯ್ಯ ಅವರನ್ನು ಎರಡು ರೂಪದಲ್ಲಿ ನಾನು ನೋಡಿರುವೆ. ಅವರ ಮೇಲೆ ಕೆಲ ಕಾಂಗ್ರೆಸ್ ನಾಯಕರ ಪ್ರಭಾವ ಇದೆ. ಅವರ ಆಡಳಿತ ಮೇಲು ಇದೆ, ರಾಜಕೀಯ ವಿಚಾರದಲ್ಲೂ ಇದೆ. ಅದರ ಒಂದು ಭಾಗವಾಗಿ ಹರಿಪ್ರಸಾದ್ ಅವರು ಮಾತನಾಡಿದ್ದಾರೆ. ಅವರು ಸಂಪೂರ್ಣವಾಗಿ ಮಾತನಾಡಿದ್ರೂ, ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಒಂದು ಗೊತ್ತಾಗುತ್ತದೆ, ಹರಿ ಪ್ರಸಾದ್ ಅವರ ಪ್ರಭಾವ ಹೆಚ್ಚಿದೆ ಎಂದರು.

Loading

Leave a Reply

Your email address will not be published. Required fields are marked *