ನಿರ್ಮಲಾ ಸೀತಾರಾಮನ್ ಅವರನ್ನು ನಾನು ಭೇಟಿಯಾಗಲು ಕೇಳಿದ್ದೇನೆ: ಡಿ.ಕೆ ಶಿವಕುಮಾರ್

ನವದೆಹಲಿ: ಕೋವಿಡ್ (Covid) ಉಲ್ಬಣವಾಗುತ್ತಿರುವ ಬಗ್ಗೆ ಯಾರೂ ಗಾಬರಿಯಾಗುವುದು ಬೇಡ. ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜನರು ಆತಂಕಗೊಳ್ಳಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ನವದೆಹಲಿಯಲ್ಲಿ (New Delhi) ಮಾತನಾಡಿದ ಅವರು, ಈಗಾಗಲೇ ಜನರು ಮಾಸ್ಕ್ ಹಾಕಲು ಆರಂಭಿಸಿದ್ದಾರೆ. ಕೊರೊನಾ (Corona) ಹೆಚ್ಚಾಗುತ್ತಿದೆ ಎಂದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಇನ್ನು ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಅವರು, ಪಕ್ಷದ ಕೆಲ ವರಿಷ್ಠರನ್ನು ಭೇಟಿ ಮಾಡಲು ಬಂದಿದ್ದೇವೆ. ಕೆಲವು ಕೇಂದ್ರ ಸಚಿವರ ಭೇಟಿಗೂ ಸಮಯ ಕೇಳಿದ್ದೇವೆ. ಮುಖ್ಯಮಂತ್ರಿಗಳಿಗೆ ಪಿಎಂ ಅವರು ಸಮಯ ನೀಡಿದ್ದಾರೆ. ನಾನು ಸಹ ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ. ನಿರ್ಮಲಾ ಸೀತಾರಾಮನ್ ಅವರನ್ನು ನಾನು ಭೇಟಿಯಾಗಲು ಕೇಳಿದ್ದೇನೆ. ಆದರೆ ಸಮಯ ಇನ್ನು ನಿಗದಿ ಆಗಿಲ್ಲ ಎಂದರು.

ನಿಗಮಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷದ ಸಭೆ ಇದೆ. ನಿಗಮ ಮಂಡಳಿ ವಿಚಾರ ಫೈನಲ್ ಮಾಡುತ್ತೇವೆ. ಖಂಡಿತವಾಗಿಯೂ ಅದನ್ನ ಮಾಡಲೇಬೇಕು. ಎಷ್ಟು ದಿನ ಅಂತ ನಾವು ಖಾಲಿ ಇಟ್ಟುಕೊಳ್ಳಲು ಸಾಧ್ಯ? ಎಷ್ಟು ಅಂತ ಮಾಡುತ್ತೇವೆ ಎಂದು ಹೇಳೋಕೆ ಆಗಲ್ಲ. ಆದರೆ ಶಾಸಕರದ್ದು ಫಸ್ಟ್ ಲಿಸ್ಟ್‌ನಲ್ಲಿ ಮುಗಿಸುತ್ತೇವೆ. 3 ಹಂತದಲ್ಲಿ ನಿಗಮ ಮಂಡಳಿ ಫೈನಲ್ ಮಾಡುತ್ತೇವೆ ಎಂದರು. CWC ಮೀಟಿಂಗ್ 28ಕ್ಕೆ ನಾಗಪುರದಲ್ಲಿ ನಡೆಯಲಿದೆ. ಅದಕ್ಕಿಂತ ಮುಂಚೆ 21ಕ್ಕೆ ಇಲ್ಲೊಂದು ಸಭೆ ಮಾಡಲಾಗುತ್ತದೆ ಎಂದು ತಿಳಿಸಿದರು.

Loading

Leave a Reply

Your email address will not be published. Required fields are marked *