ಈ ಗಂಭೀರ ಆರೋಪದಿಂದಾಗಿ ನಾನು ಆಘಾತಕ್ಕೆ ಒಳಗಾಗಿದ್ದೇನೆ: ಕೇಂದ್ರ ಸಚಿವ ಭಗವಂತ ಖೂಬಾ

ನವದೆಹಲಿ: ಮಾಜಿ ಸಚಿವ ಪ್ರಭು ಚವ್ಹಾಣ್ (Prabhu Chauhan) ವಿರುದ್ಧ ನೂರು ಕೋಟಿ ಮಾನಹಾನಿ (Defamation) ಪ್ರಕರಣ ದಾಖಲಿಸಲು ಚಿಂತಿಸಿದ್ದು, ಈ ಬಗ್ಗೆ ಹೈಕಮಾಂಡ್ ನಾಯಕರ ಅನುಮತಿ ಕೇಳಿದ್ದೇನೆ. ವರಿಷ್ಠರು ಅನುಮತಿ ನೀಡಿದರೆ ಕಾನೂನು ಹೋರಾಟ ಮಾಡಲಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಹೇಳಿದ್ದಾರೆ.

ನನ್ನ ಹತ್ಯೆಗೆ ಸಂಚು ನಡೆದಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಪ್ರಭು ಚವ್ಹಾಣ್ ಆರೋಪಕ್ಕೆ ನವದೆಹಲಿಯಲ್ಲಿ (New Delhi) ಪ್ರತಿಕ್ರಿಯಿಸಿದ ಅವರು, ಈ ಗಂಭೀರ ಆರೋಪದಿಂದಾಗಿ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಇದರಿಂದ ನನ್ನ ಕುಟುಂಬ ವಿಚಲಿತವಾಗಿದೆ. ಹೇಳಿಕೊಳ್ಳಲಾಗದಷ್ಟು ಮನಸ್ಸಿಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡಲದ ಕಾರ್ಯಕಾರಣಿಯಲ್ಲಿ ಮಾತನಾಡುವ ಮಾತು ಬಿಟ್ಟು ನನ್ನ ಮೇಲೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು, ಹಿತೈಷಿಗಳು ನಿರಂತರವಾಗಿ ಸಂಪರ್ಕ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಪ್ರಭು ಚವ್ಹಾಣ್ ಆರೋಪ ಮೋಸ ಮತ್ತು ಕಪಟದಿಂದ ಕೂಡಿದೆ. ಕಳೆದ 9 ವರ್ಷದ ಹಿಂದೆ ಇದೇ ರೀತಿ ಆರೋಪ ಮಾಡಿದ್ದರು ಎಂದರು.

ನನ್ನ ಮತ್ತು ಅವರ ಸಮಸ್ಯೆ ಪಕ್ಷದ ವೇದಿಕೆಯಲ್ಲಿ ಬಗೆಹರಿಯುತ್ತವೆ. ತಪ್ಪು ತಿಳುವಳಿಕೆ ಸರಿಯಾಗಬಹುದು ಎಂದು ಭಾವಿಸಿದ್ದೆ. ಆದರೆ ಇದರ ಹಿಂದೆ ತಂತ್ರ, ಕುತಂತ್ರ, ಮೋಸ, ಕಪಟತನವಿದೆ ಎಂದು ಈಗ ಅರ್ಥವಾಗಿದೆ. ನನ್ನ ಚರಿತ್ರೆ, ಪಕ್ಷದ ಸೇವೆ ನೋಡಿ ಮೋದಿ ಅವರು ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

Loading

Leave a Reply

Your email address will not be published. Required fields are marked *