ಸಾಲ ಮಾಡಿ ಚಿಕಿತ್ಸೆ ಪಡೆಯುವಂತಹ ದುಸ್ಥಿತಿಯಲ್ಲಿ ನಾನಿಲ್ಲ: ನಟಿ ಸಮಂತಾ

ಹಲವು ದಿನಗಳಿಂದ ಸಮಂತಾ ಬಗ್ಗೆ ಹಣಕಾಸಿನ ವಿಚಾರವೊಂದು ಭಾರೀ ಸದ್ದು ಮಾಡುತ್ತಿತ್ತು. ಅವರು ತಮಗಿರೋ ಮೈಯೋಸಿಟಿಸ್  ಖಾಯಿಲೆ ಚಿಕಿತ್ಸೆಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಮಾಡಿದ್ದಾರೆಂದು, ಆ ಸಾಲವನ್ನು ನಟನೊಬ್ಬನಿಂದ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು.
ಈ ಸುಳ್ಳು ಸುದ್ದಿಗೆ ಸಮಂತ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಲ ಮಾಡಿ ಚಿಕಿತ್ಸೆ ಪಡೆಯುವಂತಹ ದುಸ್ಥಿತಿಯಲ್ಲಿ ನಾನಿನಲ್ಲ ಎಂದಿದ್ದಾರೆ.
‘ನನಗಿರೋ ಕಾಯಿಲೆಗೆ ಚಿಕಿತ್ಸೆ ಪಡೆಯಲು 25 ಕೋಟಿ ರೂಪಾಯಿ ಸಾಲ ಮಾಡಿದ್ದೇನೆ ಎನ್ನುವುದು ಶುದ್ದ ಸುಳ್ಳು. ಚಿಕಿತ್ಸೆಗೆ ಅಷ್ಟು ಹಣದ ಅವಶ್ಯಕತೆಯಿಲ್ಲ. ನಾನು ದುಡಿದ ಹಣದಲ್ಲೇ ಸ್ವಲ್ಪ ಖರ್ಚು ಮಾಡುತ್ತಿದ್ದೇನೆ. ನನಗಿರೊ ಕಾಯಿಲೆ ದೊಡ್ಡದೇನೂ ಅಲ್ಲ. ಸಾವಿರಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇಕಾಬಿಟ್ಟಿ ಪೋಸ್ಟ್ ಮಾಡುವ ಬದಲು ಆಲೋಚಿಸಿ’ ಎಂದು ಸ್ಯಾಮ್ ಬರೆದುಕೊಂಡಿದ್ದಾರೆ.
ಸಮಂತಾ  ಅನಾರೋಗ್ಯದಿಂದ ದೂರದ ದೇಶಕ್ಕೆ ಚಿಕಿತ್ಸೆಗಾಗಿ  ಹೋಗಿರುವುದು, ಕೆಲವು ತಿಂಗಳಲ್ಲಿ ಅಮೆರಿಕಾಕ್ಕೆ  ಹಾರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಹೊರ ಬಿದ್ದಿರುವ ಸತ್ಯ ದೇವುಡಾ ಎನ್ನುವಂತಿದೆ. ಕಾರಣ ಅದೊಬ್ಬ ಸ್ಟಾರ್ ಭರ್ತಿ 25 ಕೋಟಿ ರೂಪಾಯಿ ಕೊಟ್ಟಿದ್ದಾನೆಂದು ಹೇಳಲಾಗಿತ್ತು.

Loading

Leave a Reply

Your email address will not be published. Required fields are marked *