ಕ್​ಮೇಲ್​ ರಾಜಕಾರಣಕ್ಕೆ ಹೆದರುವವನು ನಾನಲ್ಲ – ಹೆಚ್ ಡಿ ರೇವಣ್ಣ

ಹಾಸನ :- ಬ್ಲಾಕ್​ಮೇಲ್​ ರಾಜಕಾರಣಕ್ಕೆ ಹೆದರುವವನು ನಾನಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ಕಳೆದ 40 ವರ್ಷಗಳಿಂದ ನಾನು ರಾಜಕಾರಣ ‌ಮಾಡುತ್ತಿದ್ದೇನೆ. ಬ್ಲಾಕ್​ಮೇಲ್​ಗೆ ನಾನು ಹೆದರುವುದಿಲ್ಲ ಎಂದರು.

ಕೆಲವರು ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ದಾರೆ.

ಬೇರೆಯವರಿಗೆ ಏನು ಬೇಕಾದರೂ ಬ್ಲಾಕ್​ಮೇಲ್ ಮಾಡಿಕೊಳ್ಳಲಿ. ಕೆಲವರ ಮಾತಿಗೆ ನಾನು ಉತ್ತರ ಕೊಡಲ್ಲ, ಬ್ಲಾಕ್​ಮೇಲ್​ಗೆ ಹೆದರಲ್ಲ. ಆರೋಪ ಹಾಗೂ ಅಪಪ್ರಚಾರಕ್ಕೆ ಕಾನೂನು ರೀತಿ‌ ಉತ್ತರ ಕೊಡುವೆ. ಬೇರೆಯವರ ಬಳಿ ಬ್ಲಾಕ್​ಮೇಲ್​ ಮಾಡಿ‌ ಯಶಸ್ವಿ ಆಗಿರಬಹುದು. ಅಂಥದೆಲ್ಲಾ ನನ್ನ ಬಳಿ ಆಗಲ್ಲ ಎಂದು ದೇವರಾಜೇಗೌಡ ವಿರುದ್ಧ ಕಿಡಿಕಾರಿದ್ದಾರೆ

ಅವರು 3 ಬಿಟ್ಟಿರುವವರು, ಅಂಥವರನ್ನು ಮನೆ ಬಾಗಿಲಿಗೂ ಸೇರಿಸಲ್ಲ. ದೇವೇಗೌಡರನ್ನು ಎದುರಿಸಲಾಗದವರು ಇಂತವರನ್ನು ಬಿಡುತ್ತಾರೆ ಎಂದು ಪರೋಕ್ಷವಾಗಿ ‌ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧನಿದ್ದೇನೆ. ನಾವು ಭ್ರಷ್ಟಾಚಾರ ಮಾಡಿದ್ದರೆ‌ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಅದೇನೋ ತೋರಿಸುವೆ ಅಂದಿದ್ದಾರಲ್ಲ ಅದನ್ನು ಅವರು ತೋರಿಸಲಿ. ಆಮೇಲೆ‌ ನಾನೇನು ಎಂದು ತೋರಿಸುವೆ ಎಂದು ವಾರ್ನಿಂಗ್​ ಮಾಡಿದ್ದಾರೆ.

Loading

Leave a Reply

Your email address will not be published. Required fields are marked *