ತುಮಕೂರು: ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರುನಲ್ಲಿ ನಟ ಚೇತನ ಅಹಿಂಸಾ ಪ್ರತಿಕ್ರಿಯೇ ನೀಡಿದ್ದಾರೆ. ಮಾತನಾಡುವ ಹಕ್ಕು ಎಲ್ಲರಿಗೂ ಇದೆ, ಆದರೆ ಸನಾತನ ಧರ್ಮ ಅನ್ನೋದನ್ನು ಅವರು ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು ಯಾಕಂದ್ರೆ ನಾನು ಸನಾತನ ಧರ್ಮದ ವಿರೋಧಿಯಲ್ಲ, ನಾನು ಸನಾತನ ಧರ್ಮದಲ್ಲಿನ ಅಸಮಾನತೆಯ ವಿರೋಧಿ ಎಂದು ನಟ ಚೇತನ ಅಹಿಂಸಾ ಹೇಳಿದರು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ.
ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ. ಅದು ಸಮ ಸಮಾಜದ ಸಿವಿಲ್ ಕೋಡ್ ಆಗಿರಬೇಕು.. ಕಮ್ಯೂನಿಸ್ಟ್ʼರು ಅದನ್ನು ವಿರೋಧಿಸಬಹುದು.ಆದರೂ ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ ಎಂದರು. ಇನ್ನೂ ಕಾಂಗ್ರೆಸ್ ನವರು ತಂದಿರುವ ಐದು ಗ್ಯಾರಂಟಿ ತೇಪೆ ಹೆಚ್ಚುವ ಕೆಲಸವಾಗಿದ್ದು, ಅದನ್ನು ದೇವರಾಜ್ ಅರಸರ ಆಡಳಿತಕ್ಕೆ ಹೋಲಿಸಬೇಡಿ ಯಾಕಂದ್ರೆ ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.