ಬೆಂಗಳೂರು: ಹುಳಿಮಾವು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ನೈಜೀರಿಯಾ ಮೂಲದವರ ಇಬ್ಬರು ಆರೋಪಿಗಳ ಬಂಧಿಸಿದ್ದಾರೆ. ಇಮ್ಯಾನುಯಲ್, ಹುಚ್ಚೆನ್ನಾ ಲಿವೆನಸ್ ಬಂಧಿತ ಆರೋಪಿಗಳಾಗಿದ್ದು, ಆನ್ಲೈನ್ ಮೂಲಕ ಬುಕ್ ಮಾಡಿಸಿಕೊಂಡು ಆರೋಪಿಗಳು ಕೇರಳ ಮೂಲದವರಿಗೆ ಡ್ರಗ್ ಮಾರಾಟ ಮಾಡುತಿದ್ದರು. ಸಣ್ಣ ಬಟ್ಟೆಯಲ್ಲಿ ಎಮ್ ಡಿ ಎಮ್ ಎ ಕ್ರಿಸ್ಟೆಲ್, ಪಿಲ್ಸ್ ಕಟ್ಟಿ ಬಿಸಾಕುತ್ತಿದ್ದರು. ನಂತರ ಲೊಕೇಷನ್ ಹಾಕಿ ಕನ್ಸ್ಯೂಮರ್ಸ್ ಗೆ ಹೇಳುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.5ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದು, ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.