ಎಣ್ಣೆ ಪ್ರಿಯರಿಗೆ ಶಾಕ್: ಅಬಕಾರಿ ಸುಂಕ ಶೇಕಡಾ 20ರಷ್ಟು ಹೆಚ್ಚಳ

ಬೆಂಗಳೂರು : 2023-24ನೇ ಸಾಲಿನ ಬಹುನಿರೀಕ್ಷೆಯ 14ನೇ ಬಾರಿಯ ಬಜೆಟ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲು ಆರಂಭಿಸಿದ್ದಾರೆ. ಬಜೆಟ್ ಆರಂಭದಲ್ಲಿ ಮಾತನಾಡಿ ಬಸವಣ್ಣ, ಕುವೆಂಪು ಅವರನ್ನು ನೆನಪಿಸಿಕೊಂಡಿದ್ದಾರೆ.
ಇದು ನಾನು ಮಂಡಿಸುತ್ತಿರುವ 14ನೇಯ ಆಯವ್ಯಯ ಪತ್ರ ಮುಖ್ಯಮಂತ್ರಿಯಾಗಿ ವಿತೀಯ ಹೊಣೆಯನ್ನು ಹೊತ್ತು ಮಂಡಿಸುತ್ತಿರುವ ಏಳನೆಯ ಬಜೆಟ್. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರು ಆಯವ್ಯಯದ ಪತ್ರಗಳನ್ನು ಮಂಡಿಸಿದ್ದೆ. ನನ್ನ ಇಷ್ಟೂ ಆಯವ್ಯಯ ಪತ್ರಗಳ ಹಿಂದೆ ಯಾವ ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ನಾಡಿನ ಶ್ರೇ ಮನಸ್ಸುಗಳನ್ನು ಬಯಸಿದ್ದವೋ ಅನ್ನೂ ಈಡೇರಿಸಲೇಬೇಕೆನ್ನುವ ಉದ್ದೇಶ, ಬದ್ದತೆಗಳು ಸ್ಪಷ್ಟವಾಗಿದೆ ನಮ್ಮ ಪಕ್ಷ ದ್ಯೇಯದ್ದೇಶವೂ ಸಹ ಇದುವೇ ಆಗಿದೆ.
ನನ್ನ ಹಿಂದಿನ ಎಲ್ಲಾ ಆಯವ್ಯಯಗಳಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮೂಲ ಮಂತ್ರದ, ಕರ್ನಾಟಕ ಮಾದರಿಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ ಇಂದು ಮಂಡಿಸುವ ಬಜೆಟ್ನಲ್ಲೂ ವಿಸ್ತಾರವಾಗಿಸುವ ಪ್ರಯತ್ನವಿದೆ ಎಂದಿದ್ಧಾರೆ.
ಈ ಬಾರಿಯಬಾರಿಯ ಬಜೆಟ್ ಗಾತ್ರ 3,24,478 ಕೋಟಿಯಾಗಿದೆ. ಕಳೆದ ಬಾರೀ ಬೊಮ್ಮಯಿ ಅವರು 3,9,181 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದಾರೆ. ಕಳೆದ ಬಾರಿಗಿಂತ 18 ಸಾವಿರ ಕೋಟಿ ಹೆಚ್ಚಿಗೆ ಮಾಡಿ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳಿಗೆ ಹಣ ಸರಿದೂರಿಸಲು ಮೊದಲ ಬಜೆಟ್ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸಿದೆ ಅಬಕಾರಿ ತೆರಿಗೆ ಶೇಕಡಾ 20ರಷ್ಟು ಹೆಚ್ಚಳವಾಗಿದ್ದು, ಬಿಯರ್ ಮೇಲಿನ ಅಬಕಾರಿ ಸುಂಕ ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Loading

Leave a Reply

Your email address will not be published. Required fields are marked *