ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಅಂಗೀಕಾರಗೊಂಡ ನಾರಿಶಕ್ತಿ ವಂದನ್ ಅಧಿನಿಯಮ್ ವಿಧೇಯಕಕ್ಕೆ ರಾಜ್ಯಸಭೆಯೂ (Rajya Sabha) ಒಪ್ಪಿಗೆ ನೀಡಿತು. 215 ಮತಗಳ ಮೂಲಕ ವಿಧೇಯಕವನ್ನು ಅವಿರೋಧವಾಗಿ ಅಂಗೀಕಾರವಾಗಿದೆ. ಈ ಮೂಲಕ ಮಂಡನೆಯಾದ ಮೊದಲ ಮಸೂದೆ ಅವಿರೋಧವಾಗಿ ಪಾಸ್ (Rajya Sabha Passed Unanimously) ಆಗುವ ಮೂಲಕ ರಾಜ್ಯಸಭೆ ದಾಖಲೆ ನಿರ್ಮಿಸಿದೆ.

ಮಹಿಳಾ ಮೀಸಲಾತಿ ಕಾಯ್ದೆ (Womens Reservation Bill) ಜಾರಿಯಾದರೆ ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ರಾಜಕೀಯ ಮೀಸಲಾತಿ ದೊರೆಯಲಿದೆ.
`ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಕರೆಯಲಾಗುವ ಮಹಿಳಾ ಮೀಸಲಾತಿ ವಿಧೇಯಕವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ (Arjun Ram Meghwal) ಅವರು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಮಂಡಿಸಿದರು.

ರಾಜ್ಯಸಭೆಯಲ್ಲೂ ಈ ವಿಧೇಯಕದ ಕುರಿತು ಕಾಂಗ್ರೆಸ್ ಸಂಸದ, ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರು ಮಾತನಾಡಿದರು.
ಲೋಕಸಭೆಯಲ್ಲಿ ಪಾಸ್ ಮಾಡಿರುವ ಮಹಿಳಾ ಮೀಸಲು ವಿಧೇಯಕದಲ್ಲಿ ಇತರ ಹಿಂದುಳಿದ ವರ್ಗದ ಮಹಿಳೆಯರು, ಎಸ್ ಸಿ, ಎಸ್ ಟಿ ಕೆಟಗರಿಯ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದವು. 2024ರಲ್ಲೇ ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಎಂದು ಐಎನ್ಡಿಐಎ ಕೂಟ ಒತ್ತಾಯಿಸಿತು. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಮಹಿಳಾ ಮೀಸಲಾತಿ ಬಿಲ್ ಬೆಂಬಲಿಸಿ ಮಾತನಾಡಿದರು.

Loading

Leave a Reply

Your email address will not be published. Required fields are marked *