ಬೆಂಗಳೂರು: ದೇಶಾದ್ಯಂತ ವಾಹನಗಳಲ್ಲಿ ಏಕರೂಪದ ನಂಬರ್ ಪ್ಲೇಟ್ ಇಲ್ಲ.ಹೀಗಾಗಿ ವಾಹನಗಳನ್ನ ಕಳ್ಳತನ ಮಾಡಿದ ಕಳ್ಳರು ನಂಬರ್ ಪ್ಲೇಟ್ ಸುಲಭವಾಗಿ ಬದಲಾಯಿಸುತ್ತಾರೆ.ಇದಕ್ಕೆಲ್ಲಾ ಬ್ರೇಕ್ ಹಾಕಬೇಕು ಅಂತ ಸರ್ಕಾರ ಮುಂದಾಗಿದ್ದು, ಇನ್ಮೇಲೆ ಹಳೆ ಎಲ್ಲಾ ವಾಹಗಳಲ್ಲಿ ಹೈ ಸೆಕ್ಯುರಿಟಿ ನಂಬರ್ನ್ನ ಕಡ್ಡಾಯ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಆರ್ಟಿಓ ಇಲಾಖೆ ಎಂದಾಕ್ಷಣ ಲಂಚ, ಭ್ರಷ್ಚಷಾರದ ಇಲಾಖೆ ಎಂಬುದು ಜನಸಾಮಾನ್ಯರ ಭಾವನೆ. ಈ ಕಳಂಕ ಹೋಗಲಾಡಿಸಲು ಸಾರಿಗೆ ಇಲಾಖೆ ಮುಂದಾಗಿದೆ.ಹೌದು ಈಗಾಗಲೇ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿರೋ ಸಾರಿಗೆ ಇಲಾಖೆ ಇದೀಗ ಹಳೆಯ ವಾಹನಗಳಿಗೂ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿದೆ. ಒಂದು ವೇಳೆ ಆಳವಡಿಸದೆ ಹೋದರೆ ದಂಡ ಕಟ್ಟಬೇಕಾಗುತ್ತೆ ಅಂತ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಹೌದು ರಾಜ್ಯದಲ್ಲಿ 2019 ರ ಹಿಂದೆ ನೋಂದಾಯಾದ ಸುಮಾರು 2 ಕೋಟಿ ವಾಹನಗಳಲ್ಲಿ ಹಳೆ ನಂಬರ್ ಪ್ಲೇಟ್ ಇದೆ. ಹಳೆ ವಾಹನಗಳ ನೋಂದಾಣಿ ಫಲಕಗಳನ್ನ ಬದಲಿಸಿ ಕಡ್ಡಾಯವಾಗಿ ಎಚ್ಎಸ್ಆರ್ಪಿ ಆಳವಡಿಸಬೇಕೆಂದು ಸಾರಿಗೆ ಇಲಾಖೆ ಸೂಚಿಸಿದೆ.ರಾಜ್ಯದಲ್ಲಿ 2019 ಏಪ್ರಿಲ್ 1 ಕ್ಕೂ ಮುನ್ನ ನೋಂದಾಣಿಯಾದ ಎಲ್ಲಾ ಹಳೆ ವಾಹನಗಳಿಗೆ ನವೆಂಬರ್ 17 ರೊಳಗೆ ಕಡ್ಡಾಯವಾಗಿ ಎಚ್ಎಸ್ಆರ್ಪಿ ಪ್ಲೇಟ್ ಆಳವಡಿಸಬೇಕು. ಇಲ್ಲದಿದ್ದರೆ ವಾಹನ ಮಾಲೀಕರಿಗೆ 500 ರಿಂದ 1 ಸಾವಿರ ವರೆಗೆ ದಂಡ ವಿಧಿಸಲಾಗ್ತದೆ ಅಂತ ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಸದ್ಯ ಉತ್ಪಾದನೆ ಯಾಗುವ ಎಲ್ಲಾ ವಾಹನಗಳಿಗೆ ಉತ್ವಾದಕರೇ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನೀಡುವುದು ಕಡ್ಡಾಯಗೊಳಿಸಲಾಗಿದೆ.ದುಷ್ಕೃತಕ್ಕೆ ನಂಬರ್ ಪ್ಲೇಟ್ ಬಳಕೆ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.ಎಚ್ಎಸ್ಆರ್ಪಿ ಗಳಲ್ಲಿ ವಿವಿಧ ಸ್ತರದ ಭದ್ರತಾ ಅಂಶಗಳು ಇರುತ್ತವೆ.ಈ ರೀತಿಯ ನಂಬರ್ ಪ್ಲೇಟ್ ಗಳನ್ನ 2005 ರಲ್ಲಿ ಜಾರಿಗೆ ತರಲಾಗಿತ್ತು.ಆದರೆ ಪರಿಪೂರ್ಣ ವಾಗಿ ಅನುಷ್ಠಾನ ವಾಗಲಿಲ್ಲ.ಈಗ ಇರುವ ನಿಯಮದ ಪ್ರಕಾರ ಈ ನಂಬರ್ ಪ್ಲೇಟ್ ಗಳನ್ನ ಅಧಿಕೃತ ವ್ಯಾಪಾರಿಗಳಿಂದ ಡೀಲರ್ ಅಥವಾ ವಾಹನ ಮಾಲೀಕರು ಖರೀದಿಸಿ ಆಳವಡಿಕೆ ಮಾಡಬೇಕು ಎಂಬ ಅಂಶವಿದೆ. ಕೇಂದ್ರ ಸರ್ಕಾರ ವಾಹನ ತಯಾರಿಕಾ ಕಂಪನಿಗಳೇ ಕಡ್ಡಾಯವಾಗಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಗಳನ್ನ ಒದಗಿಸಬೇಕು ಎಂದು ಈಗ ಸೂಚಿಸಿದೆ.ಇದರಂತೆ ರಾಜ್ಯದಲ್ಲಿ ಆದೇಶ ಅನ್ವಯ ವಾಲಿದೆ.
ವಾಹನಗಳ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ವಿಶೇಷತೆ ಏನು.. !
– ವಾಹನ ಕಳ್ಳತನ ಮಾಡಿದರೆ ಸುಲಭವಾಗಿ ನಂಬರ್ ಪ್ಲೇಟ್ ಬದಲಾವಣೆ ಮಾಡಿತ್ತಾರೆ.ಆದರೆ ಹೈ ಸೆಕ್ಯುರಿಟಿ ನಂಬರ್ ಆಳವಡಿಸಿದರೆ ಬದಲಾವಣೆ ಅಸಾಧ್ಯ
– ಹೆಸರೇ ಸೂಚಿಸುವಂತೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಇದಾಗಿದೆ.ದೇಶಾದ್ಯಂತ ಒಂದೇ ವಿನ್ಯಾಸ ಹೊಂದಿರುತ್ತದೆ.ಅಲ್ಯುಮಿನಿಯಮ್ ನಿಂದ ತಯಾರಿಸಲಾದ ಪ್ಲೇಟ್ ಇದಾಗಿದೆ.ವಾಹನ ದ ನೋಂದಾಣಿ ಸಂಖ್ಯೆ ಜತೆಗ ಪ್ರತಿ ಪ್ಲೇಟ್ ನಲ್ಲೂ 7 ಅಂಕಿ ಅಂಶಗಳ ವಿಶಿಷ್ಟ ಲೇಸರ್ ಕೋಡ್ ಇರುತ್ತದೆ.
-ನಂಬರ್ ಪ್ಲೇಟ್ ನಲ್ಲಿ ಕ್ರೋಮಿಯಂ ನಿಂದ ಮಾಡಲಾದ ಚಕ್ರದ ಗುರುತು ,ಎಂಜಿನ್ ,ಚಾಸಿಸ್ ನಂಬರ್ ಗಳು ಐಎನ್ ಡಿ ಅಂಬ ಅಕ್ಷರ ಇರುತ್ತದೆ.ವಾಹನ ಸಂಖ್ಯೆ ಮೇಲೆ 45 ಡಿಗ್ರಿ ಕೋನದಲ್ಲಿ ಇಂಡಿಯಾ ಎಂದು ಬರೆದಿರಲಾಗುತ್ತದೆ.
-ನಂಬರ್ ಪ್ಲೇಟ್ ಮರು ಬಳಿಸಲು ಅಗದು.ತೆಗೆಯಲೂ ಆಗದು.ಮುರಿದುಹೋದರೆ ಅಥವಾ ತೆಗೆಯಲು ಹೋಗಿ ಎಡವಟ್ಟಾದರೆ ಆರ್ ಟಿ ಓ ಗೇ ಹೋಗಿ ಹೊಸ ನಂಬರ್ ಪ್ಲೇಟ್ ಪಡೆಯಬೇಕು.
-ಲೇಸರ್ ಕೋಡ್ ಗಳನ್ನ ಪೊಲೀಸರು ಲೇಸರ್ ಉಪಕರಣದಿಂದ ಸ್ಕ್ಯಾನ್ ಮಾಡಿದರೆ ನಿರ್ಧಿಷ್ಟ ವಾಹನ ನಂಬರ್ ಪ್ಲೇಟ್ ಅವರದ್ದೇ ಹೌದೋ ಅಲ್ವವೋ ಎಂಬುದನ್ನ ಖಚಿತಪಡಿಸಿಕೊಳ್ಳಬಹುದು.
ಈ ಸೆಕ್ಯುರಿಟಿ ನಂಬರ್ ಪ್ಲೇಟ್ 15 ವರ್ಷ ಬಾಳಿಕೆ ಬರಲಿದೆ.ಇದರಿಂದ ಕಳವು ಆಗುವ ವಾಹನಗಳ ಸಂಖ್ಯೆ ಗೆ ಕಡಿವಾಣ ಬೀಳಲಿದೆ.ಆದರೆ ಯೋಜನೆ ಅನುಷ್ಠಾನ ವಾಗುತ್ತಾ ಅಥವಾ ಕಡತದಲ್ಲೇ ಉಳಿಯುತ್ತಾ ಅನ್ನೋದು ಸಾರಿಗೆ ಇಲಾಖೆ ಮೇಲೆ ನಿರ್ಧಾರ ವಾಗಲಿದೆ.