ಅಲಹಾಬಾದ್:– ವೈವಾಹಿಕ ಜೀವನದಲ್ಲಿನ ಅತ್ಯಾಚಾರ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿ ರಾಮ ಮನೋಹರ್ ನಾರಾಯಣ ಮಿಶ್ರಾರ ಪೀಠ ಹೇಳಿದೆ. ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳು ಇನ್ನೂ ಸುಪ್ರೀಂ ಕೋರ್ಟ್ ಮುಂದೆ ಬಾಕಿಯಿವೆ.
ಆದ್ದರಿಂದ ಸವೋನ್ನತ ನ್ಯಾಯಾಲಯ ನಿರ್ಧಾರ ಕೈಗೊಳ್ಳುವವರೆಗೆ ವೈವಾಹಿಕ ಅತ್ಯಾಚಾರಕ್ಕೆ ಯಾವುದೇ ಕ್ರಿಮಿನಲ್ ದಂಡ ಶಿಕ್ಷೆ ವಿಧಿಸಲಾಗದು ಎಂದು ಕೋರ್ಟ್ ಹೇಳಿದೆ.
ತಮ್ಮ ಮದುವೆ ಒಂದು ಅಪವಿತ್ರ ಸಂಬಂಧ ವಾಗಿದೆ ಎಂದು ದೂರುದಾರ ಮಹಿಳೆ ಅರ್ಜಿಯಲ್ಲಿ ಆರೋಪಿಸಿದ್ದಾಳೆ. ಪತಿ ತನ್ನನ್ನು ಮೌಖಿಕ ಹಾಗೂ ದೈಹಿಕ ನಿಂದನೆ ಹಾಗೂ ಬಲವಂತಕ್ಕೆ ಒಳಪಡಿಸಿದ್ದಾನೆ ಎಂಬುದು ಮಹಿಳೆಯ ಆರೋಪವಾಗಿದೆ.