ಬಂಗಾರ, ಬೆಳ್ಳಿಯ ಬೆಲೆಗಳಲ್ಲಿ ಪ್ರತಿದಿನ ವ್ಯತ್ಯಾಸ ಆಗುವುದು ಕಾಮನ್ ಆಗಿದೆ. ಮೊದಲೇ ನಮ್ಮಲ್ಲಿ ಬಂಗಾರ ಪ್ರಿಯರು ಹೆಚ್ಚು. ಹೀಗಾಗಿ ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಏನೇನು ಆಗಿದೆ ಎಂದು ತಿಳಿದುಕೊಳ್ಳಲು ಭಾರೀ ಉತ್ಸುಕ ಇರುತ್ತದೆ. ಅದೇ ರೀತಿ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಏನೇನಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಚಿನ್ನದ ದರ ಹೀಗಿದೆ. ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,415 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್ ಬೆಲೆ 5907 ರೂಪಾಯಿ ಇದೆ. ಕಳೆದ ಶುಕ್ರವಾರದಿಂದಲೂ ಸ್ಥಿರತೆ ಕಾಯ್ದುಕೊಂಡಿದ್ದ ಮಾರುಕಟ್ಟೆ ಬೆಲೆ ಇಂದು ಗ್ರಾಂನಲ್ಲಿ 5 ರುಪಾಯಿ ಹೆಚ್ಚಳ ಕಂಡಿದೆ.
ಬೆಂಗಳೂರಲ್ಲಿ ಚಿನ್ನದ ದರ
ಇನ್ನು ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5415 ರೂ ಇದ್ದು, 10 ಗ್ರಾಂ ಬೆಲೆ 54,150 ರೂ ಇದೆ. 10 ಗ್ರಾಂ ಮೇಲೆ 50 ರುಪಾಯಿ ಏರಿಕೆ ಆಗಿದೆ.
ಬೆಂಗಳೂರಲ್ಲಿ ಬೆಳ್ಳಿಯ ದರ
ಬೆಂಗಳೂರಲ್ಲಿ ಬೆಳ್ಳಿಯ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಒಂದು ಗ್ರಾಂ ಬೆಳ್ಳಿಯ ದರ 72.50 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 725 ರೂಪಾಯಿ ಇದೆ. ಬೆಳ್ಳಿಯ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ವಿವರ ಹೀಗಿದೆ..
ನಗರಗಳು | 22 ಕ್ಯಾರೆಟ್ | 24 ಕ್ಯಾರೆಟ್ |
ಬೆಂಗಳೂರು | 54,150 | 59,070 |
ಚೆನ್ನೈ | 54,550 | 59,500 |
ಕೇರಳ | 54,150 | 59,070 |
ದಿಲ್ಲಿ | 54,300 | 59,220 |
ಹೈದರಾಬಾದ್ | 54,150 | 59,070 |
ಕೋಲ್ಕತ್ತಾ | 54,150 | 59,070 |
ಮಂಗಳೂರು | 54,150 | 59,070 |
ಮುಂಬಯಿ | 54,150 | 59,070 |
ಮೈಸೂರು | 54,150 | 59,070 |