ನವದೆಹಲಿ: ಗೋದಾಮು ಜಲಾವೃತಗೊಂಡ ಹಿನ್ನೆಲೆಯಲ್ಲಿ ಮಳೆಯಿಂದ ತೊಂದರೆಗೆ ಸಿಲುಕಿದ್ದವರಿಗೆ ಕೊಡುವ ರೇಷನ್ ಕಿಟ್ಗಳು ನೀರುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ. ಹೌದು. ದೆಹಲಿಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ನಿರಂತರ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಯಿಂದಾಗಿ ದೆಹಲಿಯ ಹಲವು ಭಾಗಗಳು ಜಲಾವೃತಗೊಂಡಿವೆ. ಹೀಗಾಗಿ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪರಿಹಾರ ಕಿಟ್ಗಳನ್ನು ಸಿದ್ಧಪಡಿಸಿದ್ದರು.
ಅಲ್ಲದೆ ಈ ಕಿಟ್ಗಳನ್ನು ಸರ್ಕಾರಿ ಸ್ವಾಮ್ಯದ ಗೋದಾಮಿನಲ್ಲಿ ಇರಿಸಲಾಗಿತ್ತು. ಆದರೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಗೋದಾಮು ಇದೀಗ ಜಲಾವೃತಗೊಂಡಿದ್ದು, ಕಿಟ್ಗಳು ನಾಶವಾಗಿವೆ. ಪ್ರವಾಹ ಸಂತ್ರಸ್ತರಿಗಾಗಿ ತಯಾರಿಸಿದ್ದ ಕಿಟ್ ಗಳನ್ನು ಜಂಗ್ಪುರದ ವಾರ್ಡ್ ಸಮಖ್ಯೆ 142 ರಲ್ಲಿ ಸಂಗ್ರಹಿಸಡಲಾಗಿತ್ತು. ಸದ್ಯ ಕಿಟ್ ಗಳು ನೀರು ಪಾಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.