ಭಾರಿ ಮಳೆ: ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಡೆಹ್ರಾಡೂನ್: ಭಾರೀ ಮಳೆ ಸುರಿಯುತ್ತಿರುವ ಕಾರಣ ಉತ್ತರಾಖಂಡದ  ಸೋನ್ಪ್ರಯಾಗ ಮತ್ತು ಗೌರಿಕುಂಡ್ನಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋನ್ಪ್ರಯಾಗ್  ಮತ್ತು ಗೌರಿಕುಂಡ್ನಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಭಾರೀ ಮಳೆಯ ಪರಿಣಾಮ 4 ರಾಜ್ಯ ರಸ್ತೆ ಮತ್ತು 10 ಸಂಪರ್ಕ ರಸ್ತೆಗಳು ಮುಚ್ಚಿವೆ. ಅಲ್ಲದೇ ಧಾರಾಕಾರ ಮಳೆಯ ಪರಿಣಾಮ ಮಂದಾಕಿನಿ ಮತ್ತು ಅಲಕಾನಂದ ನದಿಗಳು ಉಕ್ಕಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆ ಸುರಿಯುತ್ತಿರುವ ಕಾರಣ ಭಾರತೀಯ ಹವಾಮಾನ ಇಲಾಖೆ  ಉತ್ತರಾಖಂಡದಲ್ಲಿ ಜುಲೈ 12ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲದೇ ಈ ಕುರಿತು ಟ್ವಿಟ್ಟರ್ನಲ್ಲಿ ಟ್ವೀಟ್ ಕೂಡಾ ಮಾಡಿದೆ. ಮಂಗಳವಾರ ಉತ್ತರಾಖಂಡದ ಗಂಗ್ನಾನಿ ಬಳಿಯ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಶೇಷಗಳು ಬಿದ್ದು ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಕುರಿತು ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಧಾಮಿ, ಪ್ರತಿವರ್ಷ ಇಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗುತ್ತದೆ. ಅತಿಯಾದ ಮಳೆಯಿಂದ ಭೂಕುಸಿತಗಳು ಉಂಟಾಗುತ್ತವೆ. ಅಲ್ಲದೇ ನದಿಗಳಲ್ಲಿ ನೀರಿನ ಮಟ್ಟವು ಹೆಚ್ಚಾಗುತ್ತದೆ.

Loading

Leave a Reply

Your email address will not be published. Required fields are marked *