ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೋರು ಮಳೆ, ಅಪಾರ್ಟ್ಮೆಂಟ್ ಗೆ ನುಗ್ಗಿದ ಹಾವು

ಯಲಹಂಕ:- ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಅಪಾರ್ಟ್ಮೆಂಟ್ ಗೆ ಹಾವು ನುಗ್ಗಿದ ಘಟನೆ ಜರುಗಿದೆ. ಕೇಂದ್ರೀಯ ವಿಹಾರದ ನೆಲಮಹಡಿಯ ನೀರಲ್ಲಿ ಕೆರೆ ಹಾವು ಕಾಣಿಸಿಕೊಂಡಿದೆ.ಯಲಹಂಕ‌ ಕೆರೆ ಕೋಡಿ ಬಿದ್ದರೆ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಮುಳುಗಡೆಯಾಗಿದೆ. ವೆಂಕಟಾಲ‌ ಕಡೆಯ ಯಲಹಂಕ‌ ಕೆರೆ‌ಕೋಡಿಯ ಮೂಲಕ ಕೆರೆ ಹಾವು ಬಂದಿದೆ. ತಗ್ಗು‌ ಪ್ರದೇಶದಲ್ಲಿ‌ ಕೇಂದ್ರೀಯ ವಿಹಾರ ನಿರ್ಮಾಣ ಆಗಿದ್ದು, ಮಳೆ ಬಂದರೆ ವಿಷಜಂತುಗಳಿಗೆ ಇದು ಸ್ವರ್ಗವಾಗಿದೆ.

ಎಲ್ಲಾ ಹಾವು, ಕ್ರಿಮಿಕೀಟ, ಕಪ್ಪೆಗಳು, ಮಳೆ ನೀರಿಂದ ಕೇಂದ್ರಿಯ ವಿಹಾರಕ್ಕೆ ಬಂದಿವೆ. ಮೊನ್ನೆ ಮತ್ತು ಕಳೆದ ರಾತ್ರಿ ಸುರಿದ ಮಳೆಗೆ‌ ಕೆರೆಹಾವು ಕೇಂದ್ರೀಯ ವಿಹಾರಕ್ಕೆ ಆಗಮಿಸಿವೆ. ಮಳೆ ಕಡಿಮೆಯಾದರೆ ಸಹಜವಾಗಿಯೇ ಹಾವು ಚೇಳು ಕಣ್ಮರೆಯಾಗ್ತವೆ. ಮಳೆಗಾಲದಲ್ಲಿ, ಹೆಚ್ಚು ಮಳೆಯಾದರೆ ಮಾತ್ರ ಆತಂಕ ಶುರುವಾಗಿದೆ. ವಯಸ್ಸಾದ ಹಿರಿಯರು, ನಿವೃತ್ತ ನೌಕರರು, ಕೇಂದ್ರ ಸರ್ಕಾರದ ನೌಕರರು ಇಲ್ಲಿಯ ವಾಸಿಗಳಾಗಿವೆ. ಇದೀಗ ಎಲ್ಲರೂ ಹಾವು, ವಿಷಜಂತುಗಳಿಂದ ಭಯಗೊಂಡಿದ್ದಾರೆ.

Loading

Leave a Reply

Your email address will not be published. Required fields are marked *