ನಕಲಿ ವೈದ್ಯರ ಕ್ಲೀನಿಕ್ ಗಳ ಮೇಲೆ ಆರೋಗ್ಯ ಇಲಾಖೆ ದಾಳಿ..! ವೈದ್ಯನ ಬಂಧನ

ವಿಜಯನಗರ: ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ದಾಳಿ ನಡೆಸಿವೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದಲ್ಲಿ ದಾಳಿ ನಡೆಸಲಾಗಿದ್ದು, ಮಹಮ್ಮದ್ ರಫಿ (50) ಎಂಬ ನಕಲಿ ವೈದ್ಯನನ್ನು ಬಂಧಿಸಲಾಗಿದೆ. ಶಿವಪುರ ಗ್ರಾಮದ ತನ್ನ ಮನೆಯಲ್ಲಿ ನಕಲಿ ವೈದ್ಯ ಮಹಮ್ಮದ್ ರಫಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ.

ವಿಜಯನಗರ DHO ಡಾ. ಶಂಕರ್ ನಾಯ್ಕ್, ಕೂಡ್ಲಿಗಿ ಸಿಪಿಐ ಸುರೇಶ್ ತಳವಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾಳಿಯ ವೇಳೆ ಅನೇಕ ಸಿರಿಂಜ್‌ಗಳು, ಮಾತ್ರೆಗಳು, ಸ್ಟೆತೋಸ್ಕೋಪ್ ಸೇರಿದಂತೆ ಇತರೆ ವೈದ್ಯಕೀಯ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಹಮದ್ ರಫಿ ಮೇಲೆ ಹಲವು ದೂರುಗಳು ಬಂದಿದ್ದವು. ದೂರಿನ ಆಧಾರ ಮೇಲೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ದಾಳಿ ನಡೆಸಿವೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading

Leave a Reply

Your email address will not be published. Required fields are marked *