ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಂಜೆ ಮಾತುಕತೆ ನಡೆಯಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. JDS ಜೊತೆಗಿನ ಮಾತುಕತೆ ನಂತರ ವರಿಷ್ಠರು ನಮಗೆ ತಿಳಿಸುತ್ತಾರೆ. ನಮ್ಮ ನಾಯಕರು ಬೇರೆ ಬೇರೆ ಹಂತದಲ್ಲಿ ವರಿಷ್ಠರ ಜೊತೆ ಚರ್ಚಿಸಿದ್ದಾರೆ. ಜೆಡಿಎಸ್ ನವರ ಮನಸ್ಥಿತಿ ತಿಳಿದು ಬಳಿಕ ನಮ್ಮ ಜೊತೆ ಮಾತಾಡುತ್ತಾರೆ ಎಂದು ಹೇಳಿದ್ದಾರೆ. ಕಾವೇರಿ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
‘ನಮ್ಮ ವಕೀಲರು ಕೋರ್ಟ್ ಪ್ರೊಸೀಡಿಂಗ್ ನೋಡಿದ್ದಾರೆ, ರಾಜ್ಯದ ಲೀಗಲ್ ಟೀಂ ಸರಿಯಾಗಿ ವಾದ ಮಾಡಿಲ್ಲ. ಟ್ರಿಬ್ಯುನಲ್ ನಾರ್ಮ್ಸ್ ಬಗ್ಗೆ, ತಮಿಳುನಾಡಿನಲ್ಲಿ ಎಷ್ಟು ನೀರು ಬಳಕೆಯಾಗಿದೆ ಎಂಬುದನ್ನು ಹೇಳಿಲ್ಲ. ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ. ಅದನ್ನು ನಾವು ಮಾಡುತ್ತಿದ್ದೇವೆ. ಈಗಾಗಲೇ ಮಂಡ್ಯ, ಚಾಮರಾಜನಗರ, ಬೆಂಗಳೂರಿನಲ್ಲಿ ಸೇರಿ ಎಲ್ಲಾ ಕಡೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದು, ಇಂದಿನ ಸಭೆಯಲ್ಲಿ ಹೋರಾಟದ ರೂಪು ರೇಷೆ ನಿರ್ಧರಿಸಲಿದ್ದೇವೆ ಎಂದರು.