ಬಹುನಿರೀಕ್ಷಿತ ಹಾರ್ಲೆ ಡೇವಿಡ್ಸನ್ ಬೈಕ್ ರಿಲೀಸ್..! ಫೀಚರ್ಸ್ ಇಲ್ಲಿದೆ ನೋಡಿ

ಬಹುನೀರಿಕ್ಷಿತ ಹಾರ್ಲೇ ಡೇವಿಡ್ಸನ್ ಎಕ್ಸ್440(X440) ಬೈಕ್ ಮಾದರಿಯನ್ನು ಹೀರೋ ಮೊಟೋಕಾರ್ಪ್ ಜೊತೆಗಿನ ಸಹಭಾಗಿತ್ವ ಯೋಜನೆಯಡಿ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.29 ಲಕ್ಷ ಆರಂಭಿಕ ಬೆಲೆ ಹೊಂದಿದೆ.
ಹೊಸ ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್ ಮಾದರಿಯು ಗ್ರಾಹಕರ ಬೇಡಿಕೆ ಆಧರಿಸಿ ಡೆನಿಮ್, ವಿವಿಡ್ ಮತ್ತು ಎಸ್ ಎಂಬ ಮೂರು ಪ್ರಮುಖ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೆನಿಮ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ.
2.29 ಲಕ್ಷ ಬೆಲೆ ಹೊಂದಿದ್ದರೆ ವಿವಿಡ್ ರೂ. 2.49 ಲಕ್ಷ ಮತ್ತು ಎಸ್ ವೆರಿಯೆಂಟ್ ರೂ. 2.69 ಲಕ್ಷ ಬೆಲೆ ಹೊಂದಿದೆ.
ಭಾರತೀಯ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಬಜೆಟ್ ಬೆಲೆಯಲ್ಲಿ ಹೊಸ ಬೈಕ್ ಸಿದ್ದಪಡಿಸಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು 350 ಸಿಸಿ ವಿಭಾಗದ ಪ್ರಮುಖ ಕ್ಲಾಸಿಕ್ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಿದೆ. ಹೊಸ ಯೋಜನೆಗಾಗಿ ಹಾರ್ಲೆ ಕಂಪನಿಯು ಹೀರೋ ಮೊಟೋಕಾರ್ಪ್ ಜೊತೆಗೆ ಮಹತ್ವ ಒಪ್ಪಂದ ಮಾಡಿಕೊಂಡಿದ್ದು, ಎಂಜಿನ್ ಮತ್ತು ತಂತ್ರಜ್ಞಾನವನ್ನು ಜಂಟಿಯಾಗಿ ಬಳಕೆ ಮಾಡಿಕೊಳ್ಳಲಿವೆ.
ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್ ಮಾದರಿಯ ಉತ್ಪಾದನೆ, ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಹೀರೋ ಮೊಟೋಕಾರ್ಪ್ ಕಂಪನಿಯು ನಿರ್ವಹಿಸಲಿದ್ದು, ಹೊಸ ಯೋಜನೆ ಯಶಸ್ವಿಯಾದಲ್ಲಿ ಪಾಲುದಾರಿಕೆ ಯೋಜನೆ ಅಡಿ ಮತ್ತಷ್ಟು ಹೊಸ ಬಜೆಟ್ ಕ್ಲಾಸಿಕ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ.
ಹೊಸ ಎಕ್ಸ್440 ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 350 ಸಿಸಿ ಯಿಂದ 500 ಸಿಸಿ ವಿಭಾಗದಲ್ಲಿ ಪ್ರಮುಖ ಕ್ಲಾಸಿಕ್ ಮತ್ತು ಅಡ್ವೆಂಚರ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಬೈಕಿನಲ್ಲಿ 440 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಜೋಡಣೆ ಹೊಂದಿದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 27 ಹಾರ್ಸ್ ಪವರ್ ಮತ್ತು 38 ಎನ್ಎಂ ಟಾರ್ಕ್ ಉತ್ಪಾದನೆಗೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.
ಹೊಸ ಬೈಕ್ ಮಾದರಿಯಲ್ಲಿ ಹಾರ್ಲೆ ಕಂಪನಿಯು ಆಕರ್ಷಕ ಬೆಲೆಯಲ್ಲೂ ಕೂಡಾ ಸುರಕ್ಷತೆಗೆ ಆದ್ಯತೆ ನೀಡಿದ್ದು, ಹೊಸ ಬೈಕಿನ ಮುಂಭಾಗದ ಚಕ್ರದಲ್ಲಿ ಸೆಗ್ಮೆಂಟ್ ಫಸ್ಟ್ 320 ಎಂಎಂ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಜೋಡಣೆ ಮಾಡಿದೆ. ಇದರೊಂದಿಗೆ ಹೊಸ ಬೈಕ್ ಒಟ್ಟಾರೆಯಾಗಿ 190.5 ಕೆಜಿ ತೂಕ ಹೊಂದಿದ್ದು, ಇದರಲ್ಲಿರುವ ಮಸ್ಟರ್ಡ್ ಡೆನಿಮ್, ಮೆಟಾಲಿಕ್ ಡಾರ್ಕ್ ಸಿಲ್ವರ್, ಮೆಟಾಲಿಕ್ ಥಿಕ್ ಸಿಲ್ವರ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

Loading

Leave a Reply

Your email address will not be published. Required fields are marked *