ಬೆಂಗಳೂರು: ಲಾಲ್ ಬಾಗ್ ನಲ್ಲಿ ಇಂದಿನಿಂದ ಫ್ಲವರ್ ಶೋ ಆರಂಭವಾಗಲಿದ್ದು, 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಯಲಿರುವ 214ನೇ ಫ್ಲವರ್ ಶೋ ಇದಾಗಿದೆ. ಇನ್ನು ಇದನ್ನು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯರನವರು ಉದ್ಘಾಟನೆ ಮಾಡಲಿದ್ದಾರೆ. ವಿಧಾನಸೌಧ, ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್ ಇಲ್ಲಿ ಇರಲಿದೆ. ಇಂದಿನಿಂದ ಆರಂಭವಾಗುವ ಫಲಪುಷ್ಪ ಪ್ರದರ್ಶನ ಆಗಸ್ಟ್ 15ರವರೆಗೂ ನಡೆಯಲಿದೆ. ಇನ್ನು ಈ ಬಾರಿಯ ಫ್ಲವರ್ ಶೋಗೆ ಎರಡೂವರೆ ಕೋಟಿ ಹಣ ವೆಚ್ಚ ಮಾಡಲಾಗಿದೆ.