HD Kumaraswamy: ಮತ್ತೆ ವಿದೇಶ ಪ್ರವಾಸಕ್ಕೆ ತೆರಳಿದ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಯುರೋಪ್, ಕಾಂಬೋಡಿಯಾ ಬಳಿಕ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್‍ ಡಿ ಕುಮಾರಸ್ವಾಮಿಯವರು ಮತ್ತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಹೌದು. ಹೆಚ್‍ಡಿಕೆ ಈ ಬಾರಿ ದುಬೈಗೆ ತೆರಳುತ್ತಿದ್ದಾರೆ. ಬೆಂಗಳೂರಿನ ಜೆಪಿ ನಗರದ ನಿವಾಸದಿಂದ ಹೆಚ್‍ಡಿಕೆ ಈಗಾಗಲೇ ಹೊರಟಿದ್ದಾರೆ. 5 ದಿನಗಳ ಕಾಲ ದುಬೈ ಪ್ರವಾಸ ಕುಮಾರಸ್ವಾಮಿ ವಾಪಸ್ಸಾಗಲಿದ್ದಾರೆ.

ಭಾನುವಾರ ದುಬೈನಲ್ಲಿ ಯುಎಇ ಒಕ್ಕಲಿಗರ ಸಂಘದಿಂದ  ಕೆಂಪೇಗೌಡ ಉತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್‌ಡಿಕೆ ಭಾಗಿಯಾಗಲಿದ್ದಾರೆ.  ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಕೆ. ವೆಂಕಟೇಶ್, ಶಾಸಕರಾದ ಸ್ವರೂಪ್ ಸೇರಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೆಚ್‌ಡಿಕೆ ನವೆಂಬರ್ 3 ರಂದು ವಾಪಸ್ ಆಗುವ ಸಾಧ್ಯತೆ ಇದೆ.

Loading

Leave a Reply

Your email address will not be published. Required fields are marked *