ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಹುಟ್ಟು ಹಬ್ಬವನ್ನು ಇಂದು ಆಚರಿಸಿಕೊಂಡರು. ರಾತ್ರಿಯಿಂದಲೇ ಶಿವಣ್ಣ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು. ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಅವರೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನಿಧನದ ಕಾರಣದಿಂದ ಶಿವಣ್ಣ ಕಳೆದ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.
ಈ ವರ್ಷ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಬರ್ತ್ಡೇಯನ್ನ ಆಚರಿಸಿಕೊಂಡಿದ್ದಾರೆ. ಫ್ಯಾನ್ಸ್ಗಾಗಿ ತಮ್ಮ ಸಮಯವನ್ನ ಮೀಸಲಿಡುತ್ತಿದ್ದಾರೆ. ಇಂದು ಏನೆಲ್ಲಾ ಸರ್ಪ್ರೈಸ್ ಇರಲಿದೆ ಇಲ್ಲಿದೆ ಡಿಟೈಲ್ಸ್. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಜೂನ್ 12ರಂದು 61ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ‘ಆನಂದ’ ಸಿನಿಮಾದಿಂದ ವೃತ್ತಿ ಬದುಕು ಆರಂಭಿಸಿದ ನಟ, 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 60ರ ವಯಸ್ಸಿನಲ್ಲೂ ಯಂಗ್ & ಎನರ್ಜಿಟಿಕ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ಇದೀಗ ಶಿವಣ್ಣ ಹುಟ್ಟುಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ.
ಶಿವರಾಜ್ ಕುಮಾರ್ ಬರ್ತಡೇಗೆ ಫ್ಯಾನ್ಸ್ ಕಡೆಯಿಂದ ಸಿದ್ಧತೆ ನಡೆಯುತ್ತಿದೆ. ರಾತ್ರಿ 11:30ಕ್ಕೆ ನಾಗವಾರದ ಮನೆಯಲ್ಲಿ ಆಪ್ತರ ಜೊತೆ ಆಚರಣೆ ಶಿವಣ್ಣ, ಬರ್ತ್ಡೇ ಸೆಲೆಬ್ರೆಟ್ ಮಾಡಿದ್ದಾರೆ. ಬೆಳಗ್ಗೆ 8ರಿಂದ 10ಗಂಟೆಯವರೆಗೆ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದಾರೆ. ಬಳಿಕ 10:30ಕ್ಕೆ ಡಾ.ರಾಜ್ಕುಮಾರ್ ಪುಣ್ಯಭೂಮಿಯಲ್ಲಿ ಪೂಜೆ ಇರಲಿದೆ. ಇದಾದ ನಂತರ ಶಿವಣ್ಣ ನಟನೆಯ ಘೋಸ್ಟ್ ಸಿನಿಮಾದ ಟೀಸರ್ 11:45ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ ಲಾಂಚ್ ಆಗಲಿದೆ. ಮತ್ತೆ ಸಂಜೆ ನಾಗವಾರದ ಮನೆಯಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲಿದ್ದಾರೆ.