ಮತಗಟ್ಟೆ ಸ್ಥಾಪನೆಗೆ ಪಟ್ಟುಹಿಡಿದ ಗ್ರಾಮಸ್ಥರ ಮನವೋಲಿಸಿದ ಹಾಸನ ತಹಶೀಲ್ದಾರ್

ಹಾಸನ: ಮತಗಟ್ಟೆ ಸ್ಥಾಪಿಸಲು ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ ವಿಚಾರವಾಗಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಮತಾ, ಜನರ ಮನವೋಲಿಸಿದ್ದಾರೆ. ತಮ್ಮೂರಲ್ಲೂ ಮತಗಟ್ಟೆ ತೆರೆಯಿರಿ ಎಂದು ಪ್ರತಿಭಟನೆ ನಡೆಸಿದ್ದ ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬೋವಿ ಕಾಲೊನಿ ಗ್ರಾಮಸ್ಥರ ಜೊತೆ ಮಾತನಾಡಿದ ಮಮತಾ, ನಾಳೆಯೇ ಮತದಾನ ಇದೆ ಈ ಹಂತದಲ್ಲಿ ಮತಗಟ್ಟೆ ಬದಲಾವಣೆ ಅಥವಾ ಸ್ಥಾಪನೆ ಅಸಾಧ್ಯ. ನಿಮ್ಮ ಹಕ್ಕು ಚಲಾಯಿಸದಂತೆ ದಾರಿತಪ್ಪಿಸುವವರ ಮಾತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಮತದಾನಕ್ಕೆ ಬರಲು ಸಮಸ್ಯೆ ಇದ್ದವರಿಗೆ ಜಿಲ್ಲಾಡಳಿತದಿಂದಲೇ ನೆರವು ನೀಡುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆ ಪ್ರತಿಭಟನಾಕಾರರು ವಾಪಸ್ ತೆರಳಿದ್ದಾರೆ.

Loading

Leave a Reply

Your email address will not be published. Required fields are marked *