ಲಕ್ನೋ: ಖ್ಯಾತ ಯೂಟ್ಯೂಬ್ ಗಾಯಕಿ ಫರ್ಮಾನಿ ನಾಜ್ ಅವರ ಸಹೋದರನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಮೊಹಮ್ಮದ್‍ಪುರ ಮಾಫಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಖುರ್ಷಿದ್(18) ಎಂದು ಗುರುತಿಸಲಾಗಿದೆ. ಖುರ್ಷಿದ್ ಎಂದಿನಂತೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಪೊಲೀಸರ ವರದಿ ಪ್ರಕಾರ, ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್‍ನನ್ನು ಸುತ್ತುವರಿದು ಚಾಕು ತೋರಿಸಿ ಹೊಂಚು ಹಾಕಿದ್ದರು. ಈ ವೇಳೆ ಖುರ್ಷಿದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಗ್ಯಾಂಗ್ ಖುರ್ಷಿದ್‍ಗೆ ಚಾಕುವಿನಿಂದ ಇರಿದು ಸ್ಥಳದಿಂದ ಕಾಲ್ಕಿತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾ ದರೂ ಅದಾಗಲೇ ಖುರ್ಷಿದ್ ಮೃತಪಟ್ಟಿದ್ದಾರೆ ಎಂದು ವೈದರು ತಿಳಿಸಿದ್ದಾರೆ. ಈ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
‘ಹರ್ ಹರ್ ಶಂಭು’ ಗೀತೆಗಾಗಿ 2022 ರಲ್ಲಿ ಶೀಘ್ರವಾಗಿ ಫರ್ಮಾನಿ ನಾಜ್ ಖ್ಯಾತಿಯನ್ನು ಗಳಿಸಿದ್ದಾರೆ. ಫರ್ಮನಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅತೀ ಹೆಚ್ಚು ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾಜ್ ಅವರು ಹಾಡಿನ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ ವಿವಾದದಲ್ಲಿ ಸಿಲುಕಿಕೊಂಡರು ಮತ್ತು ಜಿತು ಶರ್ಮಾ ನಂತರ ಹಾಡನ್ನು ತನ್ನ ಪುಟದಿಂದ ಅಳಿಸಬೇಕಾಯಿತು, ಇನ್ನೊಬ್ಬ ಗಾಯಕ ಈ ಹಾಡನ್ನು ತನ್ನದು ಎಂದು ಹೇಳಿಕೊಂಡರು ಮತ್ತು ನಾಜ್ ವಿಷಯವನ್ನು ಕದ್ದಿದ್ದಾರೆ ಎಂದು ಆರೋಪಿಸಿದರು.