ನವದೆಹಲಿ: ಮಳೆಯಿಂದ ತತ್ತರಿಸಿದ ದೆಹಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್, ಇದು ಒಬ್ಬರು ಮತ್ತೊಬ್ಬರನ್ನು ದೂಷಿಸಿ ಮಾತನಾಡುವ ಸಮಯವಲ್ಲ. ಎಲ್ಲಾ ಪ್ರವಾಹ ಪೀಡಿತ ರಾಜ್ಯಗಳ ಸರ್ಕಾರಗಳು ಪರಿಹಾರ ನೀಡಲು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಿದೆ ಎಂದು ಕರೆ ಕೊಟ್ಟರು. ಅಲ್ಲದೆ ಜುಲೈ 8 ಮತ್ತು 9 ರಂದು ದೆಹಲಿಯಲ್ಲಿ 153 ಮಿ.ಮೀ ಮಳೆಯಾಗಿದೆ. ಈ ಮೂಲಕ ದಶಕಗಳ ದಾಖಲೆಯನ್ನು ಮುರಿದಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ 206 ಮೀಟರ್ ದಾಟಿದ ನಂತರ ನದಿ ಪಾತ್ರದ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.