ಹಾಸನ: ಹಾಸನ ತಾಲೂಕಿನ ಖೋನಾಪುರ ಗ್ರಾಮದ ಬಳಿ ಕೆರಗೋಡು ಪಿಹೆಚ್ಸಿಯಲ್ಲಿ ವೈದ್ಯರಾಗಿದ್ದ ಚಂದ್ರಶೇಖರ್ ಅವರು ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ಕರ್ತವ್ಯಕ್ಕೂ ಮುನ್ನ ಹೇಮಾವತಿ ನದಿ ಹಿನ್ನೀರಿನ ರಂಗನಾಥಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದ ಚಂದ್ರಶೇಖರ್, ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದ ವೇಳೆ ನದಿಗೆ ಇಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.