ನಂಬರ್ ಒನ್ ಮೆಸೇಜಿಂಗ್ ಆಯಪ್ WhatsApp ಅನ್ನು ಇಂದು ಕೇವಲ ಭಾರತದಲ್ಲೇ (India) ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಈಗ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಮಾತ್ರ ಇದನ್ನು ಉಪಯೋಗಿಸುತ್ತಿಲ್ಲ. ಬದಲಾಗಿ ಅನೇಕ ಅಪ್ಡೇಟ್ಗಳನ್ನು ಪರಿಚಯಿಸಿ ಗ್ರಾಹಕರ ನೆಚ್ಚಿನ ಅಪ್ಲಿಕೇಷನ್ ಆಗಿಬಿಟ್ಟಿದೆ.
ವಾರಕ್ಕೊಂದು ನೂತನ ಫೀಚರ್ಗಳ ಕುರಿತು ಘೋಷನೆ ಮಾಡುವ ವಾಟ್ಸ್ಆಯಪ್ ಎರಡು ದಿನಗಳ ಹಿಂದೆಯಷ್ಟೆ ಐಒಎಸ್ ಬಳಕೆದಾರರಿಗೆ ಎಡಿಟ್ ಸೆಂಟ್ ಮೆಸೇಜ್ ಆಯ್ಕೆ ನೀಡಿತ್ತು. ಆಂಡ್ರಾಯ್ಡ್ ನವರಿಗೆ ಹೊಸ ಕ್ರಾಪ್ ಟೂಲ್ ಎಂಬ ಫೀಚರ್ (New Feature) ಪರಿಚಯಿಸುವುದಾಗಿ ಹೇಳಿತ್ತು. ಇದೀಗ ಬಳಕೆದಾರರಿಗೆ ಖುಷಿ ನೀಡಲು ಮತ್ತೊಂದು ಅಪ್ಡೇಟ್ ನೀಡುತ್ತಿದೆ.
ವಾಟ್ಸ್ಆಯಪ್ ಆಂಡ್ರಾಯ್ಡ್ನಲ್ಲಿ ಕೆಲ ಬೀಟಾ ಪರೀಕ್ಷಕರಿಗೆ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ ಅನ್ನು ಹೊರತರುತ್ತಿದೆ. ಈ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ನಲ್ಲಿ ಸ್ಕ್ರಾಲ್ ಮಾಡುವ ಮೂಲಕ ಅನೇಕ ಆಯ್ಕೆ ಪಡೆಯಬಹುದು ಎಂದು WABetaInfo ವರದಿ ಮಾಡಿದೆ. ಜೊತೆಗೆ GIF, ಸ್ಟಿಕ್ಕರ್ ಮತ್ತು ಅವತಾರ್ ಎಂಬ ಕಾಲಮ್ಗಳನ್ನು ಮೇಲ್ಭಾಗದಲ್ಲಿ ನೀಡಲಾಗಿದೆ. ಮರುವಿನ್ಯಾಸಗೊಳಿಸಲಾದ ಕೀಬೋರ್ಡ್ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಇದು ಕೆಲವೇ ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ವಾಟ್ಸ್ಆಯಪ್ ಇದೀಗ ಹೊಸ ಕ್ರಾಪ್ ಟೂಲ್ ಎಂಬ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್ಆಯಪ್ ವಿಂಡೋಸ್ ಬಿಟಾದಲ್ಲಿ ಡ್ರಾಯಿಂಗ್ ಎಡಿಟರ್ಗಾಗಿ ಹೊಸ ಕ್ರಾಪ್ ಟೂಲ್ ತಯಾರಾಗುತ್ತಿದೆ. ಈ ಟೂಲ್ನಿಂದಾಗಿ ಬಳಕೆದಾರರು ವಾಟ್ಸ್ಆಯಪ್ನಲ್ಲಿ ಇಮೇಜ್ಗಳನ್ನು ಕ್ರಾಪ್ ಮಾಡಬಹುದು. ಜೊತೆಗೆ ಇಮೇಜ್ಗಳನ್ನು ಎಡಿಟ್ ಮಾಡಲು ಸಾದ್ಯವಾಗಲಿದೆ. ಈ ಹಿಂದೆ ಬಳಕೆದಾರರು ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೊದಲು ಕ್ರಾಪ್ ಮಾಡಬೇಕಾದರೆ ಬಾಹ್ಯ ಇಮೇಜ್ ಎಡಿಟಿಂಗ್ ಟೂಲ್ಗಳನ್ನು ಬಳಸಬೇಕಿತ್ತು. ಆದರೆ ಈ ಹೊಸ ಆಯ್ಕೆಯು ನಿಮಗೆ ಅಪ್ಲಿಕೇಶನ್ನಲ್ಲಿಯೇ ಇಮೇಜ್ ಕ್ರಾಪ್ ಮಾಡಲು ಅವಕಾಶ ನೀಡಲಿದೆ.
ಸದ್ಯ ವಾಟ್ಸ್ಆಯಪ್ ಡ್ರಾಯಿಂಗ್ ಎಡಿಟರ್ಗಾಗಿ ಕ್ರಾಪ್ ಟೂಲ್ ಕೆಲವೇ ಕೆಲ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇದು ಎಲ್ಲಾ ರೀತಿಯ ಪರೀಕ್ಷೆಗಳ ನಂತರ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ.