ಮೆಟಾ ಒಡೆತನದ ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಂ ಕೂಡಾ ಒಂದು. ಈ ಸಾಮಾಜಿಕ ಮಾಧ್ಯಮದ ಬಳಕೆಯ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ಮೆಟಾ ಸದಾ ಒಂದಲ್ಲ ಒಂದು ಅಪ್‌ಡೇಟ್‌ಗಳನ್ನು ಮಾಡುತ್ತಲೇ ಇರುತ್ತದೆ. ಇದೀಗ ಇನ್‌ಸ್ಟಾಗ್ರಾಂ ತನ್ನ ನೋಟ್ಸ್ ಫೀಚರ್‌ಗೆ ಅಪ್‌ಗ್ರೇಡ್ ಅನ್ನು ಅನಾವರಣಗೊಳಿಸಿದೆ.
ಡಿಎಂ ಸೆಕ್ಷನ್‌ನ ಮೇಲ್ಭಾಗದಲ್ಲಿ ಸಣ್ಣ ಟೆಕ್ಸ್ಟ್ ನೋಟ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಸಹಾಯವಾಗುವ ರೀತಿಯಲ್ಲಿ ಕಳೆದ ವರ್ಷ ನೋಟ್ಸ್ ವೈಶಿಷ್ಟ್ಯವನ್ನು ಇನ್‌ಸ್ಟಾಗ್ರಾಂ ಪರಿಚಯಿಸಿತ್ತು. ಇದನ್ನು ಪರಿಚಯಿಸಿದ ಬಳಿಕ ಸಣ್ಣ ಮ್ಯೂಸಿಕ್ ಮತ್ತು ವಾಯ್ಸ್ ನೋಟ್‌ಗಳನ್ನು ಕಳುಹಿಸಲು ಅನುವು ಮಾಡಿಕೊಡುವ ರೀತಿಯಲ್ಲಿ ಇನ್‌ಸ್ಟಾಗ್ರಾಂ ಈ ಫೀಚರ್‌ಗೆ ಸಾಕಷ್ಟು ಅಪ್‌ಡೇಟ್‌ಗಳನ್ನೂ ಮಾಡಿತ್ತು.
ಇದೀಗ ಇದಕ್ಕೆ ಹೊಸ ಅಪ್‌ಡೇಟನ್ನು ಇನ್‌ಸ್ಟಾಗ್ರಾಂ ಮಾಡಿದ್ದು, ಈಗ ಬಳಕೆದಾರರು ತಮ್ಮ ಡಿಎಂ ಸೆಕ್ಷನ್‌ನ ಮೇಲ್ಭಾಗದಲ್ಲಿ 2 ಸೆಕೆಂಡ್‌ಗಳ ಸಣ್ಣ ವಿಡಿಯೋ ನೋಟ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಹೊಸ ವಿಡಿಯೋ ಸ್ಟೇಟಸ್ ವೈಶಿಷ್ಟ್ಯವನ್ನು ಬಳಸಲು ನಿಮಗೆ ಸಹಾಯವಾಗುವಂತಹ ಹಂತಗಳು ಇಲ್ಲಿವೆ.