ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಕೊಂಚ ಏರಿಕೆಯಾಗಿದೆ. ಚಿನ್ನ ಖರೀದಿಯ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆ ಹಬ್ಬದ ಸೀಸನ್ನಲ್ಲಿ ದಿನಕಳೆದಂತೆ ಬೆಲೆಯೇರಿಕೆ ಆಗುವ ಲಕ್ಷಣಗಳು ಕಾಣಿಸುತ್ತಿವೆ.
ಇಂದು ಆಗಷ್ಟ್ 28 ಸೋಮವಾರ ಚಿನ್ನದ ದರ ಹೀಗಿದೆ. ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,420 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್ ಬೆಲೆ 5913 ರೂಪಾಯಿ ಇದೆ. ಕಳೆದ ಶುಕ್ರವಾರದಿಂದಲೂ ಸ್ಥಿರತೆ ಕಾಯ್ದುಕೊಂಡಿದ್ದ ಮಾರುಕಟ್ಟೆ ಬೆಲೆ ಮಂಗಳವಾರ 5 ರೂಪಾಯಿ ಏರಿಕೆಯಾಗಿದ್ದು, ಇಂದೂ ಕೂಡಾ ಇಂದು ಗ್ರಾಂನಲ್ಲಿ 5 ರುಪಾಯಿ ಹೆಚ್ಚಳ ಕಂಡಿದೆ.
ಬೆಂಗಳೂರಲ್ಲಿ ಚಿನ್ನದ ದರ
ಇನ್ನು ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5420 ರೂ ಇದ್ದು, 10 ಗ್ರಾಂ ಬೆಲೆ 54,200 ರೂ ಇದೆ.
ಬೆಂಗಳೂರಲ್ಲಿ ಬೆಳ್ಳಿಯ ದರ
ಬೆಂಗಳೂರಲ್ಲಿ ಬೆಳ್ಳಿಯ ದರದಲ್ಲಿ ಏರಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಯ ದರ 73.75 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 737.50 ರೂಪಾಯಿ ಇದೆ. ಬೆಳ್ಳಿಯ ದರದಲ್ಲಿಯೂ ಏರಿಕೆ ಆಗಿದೆ.