ಚಿನ್ನದ ಬೆಲೆ ಸ್ಥಿರತೆ, ಕೊಂಚ ಏರಿದ ಬೆಳ್ಳಿ- ರಾಜ್ಯದ ಪ್ರಮುಖ ನಗರಗಳ ಧಾರಣೆ ಹೀಗಿದೆ

ಬೆಂಗಳೂರು;- ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ ದರ ತುಸು ಏರಿಕೆ ಕಂಡಿದೆ. ನಿನ್ನೆಯ ದರವೇ ಇಂದು ಕೂಡ ಮುಂದುವರಿದಿದೆ. ಕಳೆದ ವಾರ ಕೆಜಿಯ ಮೇಲೆ 1000 ರೂ ಇಳಿಕೆಯಾಗಿದ್ದ ಚಿನ್ನದ ದರ ಈ ವಾರ ತುಸು ಏರಿಕೆಯಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿ ಮಾಡುವ ಗ್ರಾಹಕರಿಗೆ ಚಿನ್ನದ ಬೆಲೆ ಖುಷಿ ನೀಡಿದರೆ, ಬೆಳ್ಳಿ ಬೆಲೆ ಬೇಸರ ತರಿಸುವಂತಿದೆ. ಇಂದು ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿಯೋಣ.

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು 5,650 ರೂ. ಆಗಿದೆ. 8 ಗ್ರಾಂ ಚಿನ್ನದ ಬೆಲೆ 45,200 ರೂ ಇದೆ. ಇಂದು 10 ಗ್ರಾಂ ಚಿನ್ನದ ದರ 56,500 ರೂ. ಇದೆ. ನೂರು ಗ್ರಾಂ ಚಿನ್ನಕ್ಕೆ 5,65,000 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,164 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 49,321 ರೂ. ನೀಡಬೇಕು. ಹತ್ತು ಗ್ರಾಂ ಚಿನ್ನದ ದರ ಇಂದು 61,640 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,16,400 ರೂ. ನೀಡಬೇಕು.

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 56,500 ರೂ. ಇದೆ. ಮಂಗಳೂರು 56,500 ರೂ., ಮೈಸೂರಿನಲ್ಲಿ 56,500 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 61,640 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇರುತ್ತದೆ.

Loading

Leave a Reply

Your email address will not be published. Required fields are marked *