ಕಾರವಾರ: ಅರಬ್ಬಿ ಸಮುದ್ರದಲ್ಲಿ (Arabian Sea) ಹವಾಮಾನ ವೈಪರಿತ್ಯದಿಂದ 27 ಜನರಿದ್ದ ಗೋವಾ (Goa) ಮೂಲದ ಮೀನುಗಾರಿಕಾ ಬೋಟ್ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಲೇಕೇರಿಯಲ್ಲಿ (Bilikere) ನಡೆದಿದೆ. ಗೋವಾ ಮೂಲದ Ind- ga -01MM2233 ನೋಂದಣಿಯ ಕ್ರಿಸ್ಟೋರಿ ಹೆಸರಿನ ಬೋಟ್ ಇದಾಗಿದ್ದು ,
ಹವಾಮಾನ ವೈಪರೀತ್ಯದಿಂದ ಎಂಜಿನ್‌ನಲ್ಲಿ ಸಮಸ್ಯೆಯಾಗಿ ಗಾಳಿ ರಭಸಕ್ಕೆ ಬೇರೆಡೆ ತೇಲಿ ಹೋಗಿದೆ. ಕೋಸ್ಟ್ ಗಾರ್ಡ್ (Coast Guard) ಸಿಬ್ಬಂದಿ ಬೋಟ್ ಹುಡುಕುವ ಕಾರ್ಯಾಚರಣೆ ಆರಂಭಿಸಿದ್ದಾರೆ. ನೆಟ್ವರ್ಕ್ ಸಂಪರ್ಕ ಕಳೆದುಕೊಂಡಿರುವುದರಿಂದ 27 ಜನ ಮೀನುಗಾರರ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.