ಟೀಂ ಇಂಡಿಯಾ ಆಟಗಾರರ ವಿರುದ್ಧ ಗವಾಸ್ಕರ್ ಕಿಡಿ

ಳೆದ ಭಾನುವಾರ ಲಂಡನ್ ನ ದಿ ಓವಲ್ ಮೈದಾನದಲ್ಲಿ ಮುಕ್ತಾಯಗೊಂಡ ಐಸಿಸಿ ಆಯೋಜನೆಯ ಎರಡನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 444 ರನ್ ಗಳ ಗುರಿ ಹಿಂಬಾಲಿಸಿದ ರೋಹಿತ್ ಶರ್ಮಾ ಪಡೆ 234 ರನ್ ಗಳಿಸಿ 210 ರನ್ ಗಳಿಂದ ಮುಗ್ಗರಿಸಿ ದಶಕದ ನಂತರ ಐಸಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವಲ್ಲಿ ಮುಗ್ಗರಿಸಿತ್ತು.

 

ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಔಟ್ ಆಗಿದ್ದಕ್ಕೆ ಲಿಟ್ಲ್ ಮಾಸ್ಟರ್ ಟೀಕಾಪ್ರಹಾರ ನಡೆಸಿದ್ದರು. ಈಗ ಭಾರತ ತಂಡ 2023-25 ರ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಪಯಣದಲ್ಲಿ ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಕೆರಿಬಿಯನ್ ನಾಡಲ್ಲಿ 2 ಟೆಸ್ಟ್ ಪಂದ್ಯಗಳ ಸರಣಿಗಳನ್ನು ಆಡಲಿದೆ. ನಂತರ 3 ಏಕದಿನ ಹಾಗೂ 5 ಟಿ 20 ಪಂದ್ಯಗಳ ಸರಣಿಯನ್ನು ಆಡಲಿದೆ.

“ಈ ಹಿಂದೆ ಭಾರತ ತಂಡ 42 ರನ್ ಗಳಿಗೆ ಔಟ್ ಆದ ತಂಡದಲ್ಲಿ ನಾನು ಕೂಡ ಇದ್ದೆ. ಆಗ ಡ್ರೆಸಿಂಗ್ ರೂಮ್ ನಲ್ಲಿ ನಮ್ಮ ಸ್ಥಿತಿ ಶೋಚನೀಯವಾಗಿತ್ತು. ಅಲ್ಲದೆ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದೆವು. ಆದ್ದರಿಂದ ನೀವು ಈಗಿನ ತಂಡವನ್ನು ಮಾತ್ರ ಕಟುವಾಗಿ ಟೀಕಿಸುತ್ತಾರೆ ಎಂದು ಯೋಚಿಸಬಾರದು. ಆಟಗಾರರು ಪಂದ್ಯ ಸೋತ ನಂತರ ವಿಶ್ಲೇಷಣೆ ಮಾಡಿಕೊಳ್ಳಬೇಕು. ಯಾವ ರೀತಿ ವಿಕೆಟ್ ಒಪ್ಪಿಸಿದ್ದೇವೆ? ಉತ್ತಮ ಬೌಲಿಂಗ್ ಸಂಯೋಜನೆ ತೋರಲು ಏಕೆ ಸಾಧ್ಯವಾಗಲಿಲ್ಲ? ಕ್ಯಾಚ್ ಗಳನ್ನು ಏಕೆ ಹಿಡಿಯಲಿಲ್ಲ? ಪ್ಲೇಯಿಂಗ್ XI ನಲ್ಲೇ ಎಡವಿದೇವೆ ಎಂಬುದರ ಬಗ್ಗೆ ಆಲೋಚನೆ ಮಾಡಬೇಕು,” ಎಂದು ಮಾಜಿ ನಾಯಕ ಸ್ಟಾರ್ ಸ್ಪೋರ್ಟ್ಸ್ ಗೆ ತಿಳಿಸಿದ್ದಾರೆ.

“ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ 2 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದೆ. ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರಸಕ್ತ ಕಾಲಮಾನದಲ್ಲಿ ವೆಸ್ಟ್ ಇಂಡೀಸ್ ಅಷ್ಟೇನೂ ಪ್ರಭಾವಶಾಲಿ ತಂಡವಲ್ಲ. ನೀವು ಆ ತಂಡದ ವಿರುದ್ಧ 2-0, 3-0 ಅಥವಾ ಎಷ್ಟು ಪಂದ್ಯಗಳಿವೆಯೋ ಅಷ್ಟನೂ ಗೆಲ್ಲಿ ಅದು ಮುಖ್ಯವಾಗುವುದಿಲ್ಲ. ಏಕೆಂದರೆ ನೀವು ಎಷ್ಟೇ ಉತ್ತಮ ಪ್ರದರ್ಶನ ತೋರಿ ಫೈನಲ್ ಸುತ್ತು ಪ್ರವೇಶಿಸಿ ಮತ್ತೊಮ್ಮೆ ಬಲಿಷ್ಠ ಆಸ್ಟ್ರೇಲಿಯಾದ ಸವಾಲು ಎದುರಿಸಿ ಈಗ ಮಾಡಿದ ತಪ್ಪುಗಳನ್ನೇ ಪುನರಾವರ್ತನೆ ಮಾಡಿ ಪಂದ್ಯ ಸೋತು ಟ್ರೋಫಿ ಗೆಲ್ಲುವಲ್ಲಿ ಮುಗ್ಗರಿಸಿದರೆ ಏನು ಪ್ರಯೋಜನ” ಎಂದು ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ.

Loading

Leave a Reply

Your email address will not be published. Required fields are marked *