ಅತ್ಯಂತ ಕಿರಿಯ ಪ್ರಧಾನಿಯಾಗಿ ಗೇಬ್ರಿಯಲ್ ಅಟಲ್ ಆಯ್ಕೆ..!

ಫ್ರಾನ್ಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾರ್ಕೋನ್ ನಿರ್ಧಾರ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಫ್ರಾನ್ಸ್ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅಟ್ಟಲ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಗೇಬ್ರಿಯಲ್ ಅಟ್ಟಲ್ ಫ್ರಾನ್ಸ್ ಅತೀ ಕಿರಿಯ ಹಾಗೂ ಗೇ ಪ್ರಧಾನಿ ಎಂದು ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಇಮ್ಯಾನ್ಯುಯೆಲ್ ಮಾರ್ಕೋನ್ ಫ್ರಾನ್ಸ್ ಅತೀ ಕಿರಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಇದೇ ಮಾರ್ಕೋನ್ ಫ್ರಾನ್ಸ್ಗೆ ಅತೀ ಕಿರಿಯ ಪ್ರಧಾನಿಯನ್ನು ನೇಮಕ ಮಾಡಿದ್ದಾರೆ. ಗೇಬ್ರಿಯಲ್ ಅಟ್ಟಲ್ ಫ್ರಾನ್ಸ್ ಪ್ರಧಾನಿಯಾಗಿ ನೇಮಕಗೊಳ್ಳುತ್ತಿದ್ದಂತೆ ಕೆಲ ಮೂಲಭೂತವಾದಿಗಳಿಗೆ ನಡುಕು ಶುರುವಾಗಿದೆ.

34 ವರ್ಷದ ಗೇಬ್ರಿಯಲ್ ಅಟ್ಟಲ್ ಇಮ್ಯಾನ್ಯುಯೆಲ್ ಮರ್ಕೋನ್ ಫ್ರಾನ್ಸ್ ಸರ್ಕಾರದಲ್ಲಿ ಶಿಕ್ಷಣ ಸಚಿವ ಹಾಗೂ ವಕ್ತಾರನಾಗಿ ಸೇವೆ ಸಲ್ಲಿಸಿದ್ದಾರೆ. ಸೋಶಿಯಲಿಸ್ಟ್ ಪಾರ್ಟಿಯಲ್ಲಿದ್ದ ಗೇಬ್ರಿಯಲ್ 2016ರಲ್ಲಿ ಮಾರ್ಕೋನ್ ಮುಂದಾಳತ್ವದಲ್ಲಿ ಸರ್ಕಾರದ ಭಾಗವಾದರು. 2020-22ರಲ್ಲಿ ಸರ್ಕಾರದ ವಕ್ತಾರನಾಗಿ ಗೇಬ್ರಿಯಲ್ ಕೆಲಸ ಮಾಡಿದ್ದಾರೆ. ಬಜೆಟ್ ಸಚಿವ ಹಾಗೂ ಶಿಕ್ಷಣ ಸಚಿವನಾಗಿ ಗೇಬ್ರಿಯಲ್ ಕೆಲ ನಿರ್ಧಾರಗಳು ಫ್ರಾನ್ಸ್ ಮಾತ್ರವಲ್ಲ, ಇತರ ದೇಶದಲ್ಲೂ ಭಾರಿ ಸಂಚಲನ ಸೃಷ್ಟಿಸಿತ್ತು.

ಫ್ರಾನ್ಸ್ ಇತ್ತೀಚಿನ ಕೆಲ ವರ್ಷದಲ್ಲಿ ಮುಸ್ಲಿಮ್ ಮೂಲಭೂತವಾದಿಗಳಗಳಿಂದ ಬಾರಿ ಪ್ರತಿಭಟನೆ ಬಿಸಿ ಎದುರಿಸಿದೆ. ಇದರ ನಡುವೆ ಶಿಕ್ಷಣ ಸಚಿವರಾಗಿದ್ದ ಗೇಬ್ರಿಯಲ್ ಫ್ರಾನ್ಸ್ ಎಲ್ಲಾ ಶಾಲೆಗಳಲ್ಲಿ ಬುರ್ಖಾ, ಅಭಯ ನಿಷೇಧಿಸಿದ್ದರು. ಮುಸ್ಲಿಮರು ಶಾಲೆಯ ಜಾತ್ಯಾತೀತತೆಗೆ ಅಡ್ಡಿಯಾಗುತ್ತಿದ್ದಾರೆ. ಶಾಲೆಯಲ್ಲಿ ಇತರ ಧರ್ಮದವರೂ ಕಲಿಯುತ್ತಿದ್ದಾರೆ. ಒಂದು ಧರ್ಮದ ಪರವಾದ ಬಟ್ಟೆಗಳು, ಉಡುಪುಗಳು ಸಾಧ್ಯವಿಲ್ಲ. ಫ್ರಾನ್ಸ್ ಜಾತ್ಯಾತೀತತೆಗೆ ಒತ್ತು ನೀಡುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಧರ್ಮದ ಮದ ಏರುವಂತೆ ಮಾಡಲು ಫ್ರಾನ್ಸ್ ತಯಾರಿಲ್ಲ ಎಂದು ಬುರ್ಖಾ ಹಾಗೂ ಅಭಯ ನಿಷೇಧಿಸಿದ್ದರು.

ನಿರ್ಧಾರಕ್ಕೆ ಫ್ರಾನ್ಸ್‌ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಮುಸ್ಲಿಮ್ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬುರ್ಖಾ ನಿಷೇಧದಿಂದ ಮುಸ್ಲಿಮ್ ಹೆಣ್ಣುಮಕ್ಕಳು ಕಲಿಕೆ ಮೊಟಕುಗೊಳ್ಳಲಿದೆ ಎಂದು ವಾದ ಮುಂದಿಟ್ಟಿದ್ದರು. ಆದರೆ ಯಾವುದೇ ವಿರೋಧ,ಟೀಕೆಗಳಿಗೆ ಜಗ್ಗದೇ ಆದೇಶ ಕಾರ್ಯರೂಪಕ್ಕೆ ತಂದ ಹೆಗ್ಗಳಿಗೆ ಗೇಬ್ರಿಯಲ್‌ಗೆ ಇದೆ. ಇದೀಗ ಫ್ರಾನ್ಸ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಗೇಬ್ರಿಯಲ್ ಇದೇ ರೀತಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

Loading

Leave a Reply

Your email address will not be published. Required fields are marked *