ಬೆಳಂ ಬೆಳಗ್ಗೆ 5 ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡಿರುವ ಘಟನೆ ಮಂಡ್ಯ ನಗರದ ಸಮೀಪವೇ ಇರುವ ಚಿಕ್ಕಮಂಡ್ಯದಲ್ಲಿ ನಡೆದಿದೆ. ಕಾಡಾನೆಗಳಿಂದ ಕಬ್ಬು ಸೇರಿದಂತೆ ವಿವಿಧ ಬೆಳೆ ಹಾನಿಯಾಗಿದ್ದು, ನೆನ್ನೆಯಷ್ಟೆ ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಆನೆಗಳು ಇದೀಗಾ ಬೆಳ್ಳಂಬೆಳ್ಳಿಗ್ಗೆ ಚಿಕ್ಕಮಂಡ್ಯದ ಬಳಿ ಪ್ರತ್ಯಕ್ಷವಾಗಿವೆ.́
ಇನ್ನೂ ಸ್ಥಳಕ್ಕೆ ಪೊಲೀಸರು ಹಾಗೂ ಶಾಸಕ ಗಣಿಗ ರವಿಕುಮಾರ್ ಭೇಟಿ ನೀಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅದಲ್ಲದೆ ಕಾಡಾನೆಗಳನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ.