ಪುನೀತ್ ರಾಜಕುಮಾರ್ ಸಿನಿಮಾ ನಿರ್ದೇಶಿಸಿದ್ದ ಕನ್ನಡದ ಖ್ಯಾತ ನಿರ್ದೇಶಕರ ವಿರುದ್ಧ ವಂಚನೆ ಕೇಸ್‌

ಬೆಂಗಳೂರು:- ಕನ್ನಡದ ಖ್ಯಾತ ನಿರ್ದೇಶಕರೊಬ್ಬರ ವಿರುದ್ಧ ರಾಜಧಾನಿ ಬೆಂಗಳೂರಿನಲ್ಲಿ ವಂಚನೆ ದೂರು ದಾಖಲಾಗಿದೆ. ಪೃಥ್ವಿ, ಸವಾರಿ, ಸವಾರಿ-2, ಚಂಬಲ್ ಚಿತ್ರಗಳ ನಿರ್ದೇಶಕ ಜಾಕೋಬ್ ವರ್ಗೀಸ್ ಮೇಲೆ ದೂರು ದಾಖಲಾಗಿದೆ.ಸಾಕ್ಷ್ಯಚಿತ್ರದ ಕಾಪಿರೈಟ್ಸ್ ನೀಡದೆ (ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್‌ಗೆ ವಂಚನೆ ಮಾಡಲಾಗಿದೆ ಎಂದು ದೂರಲಾಗಿದೆ.ಎಚ್‌ಐವಿ ಬಾಧಿತ ಮಕ್ಕಳ ಜೀವನ ಕ್ರಮದ ಬಗ್ಗೆ ಸಂಸ್ಥೆ ಜಾಕೋಬ್‌ ಬಳಿ ವಿಡಿಯೋ ಮಾಡಿಸಿತ್ತು. ʼರನ್ನಿಂಗ್ ಪಾಸಿಟಿವ್ʼ ಎನ್ನುವ ಸಾಕ್ಷ್ಯಚಿತ್ರ ಮಾಡಲು ಫೌಂಡೇಶನ್ ಹಣ ನೀಡಿತ್ತು. ವಿಡಿಯೋ ಚಿತ್ರೀಕರಣ ಮಾಡಿದ್ದ ಜಾಕೋಬ್ ವರ್ಗೀಸ್ ಕಾಪಿರೈಟ್ಸ್ ಅನ್ನು ಸಂಸ್ಥೆಗೆ ನೀಡಿಲ್ಲ ಎಂದು ದೂರಲಾಗಿದೆ.

4 ವರ್ಷದ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ವಿಡಿಯೋ ಚಿತ್ರಿಕರಣ ಮಾಡಿದ್ದ ಜಾಕೋಬ್‌ಗೆ ವಿಡಿಯೋ ಚಿತ್ರಿಕರಣ ಮಾಡಲು ಹಂತ ಹಂತವಾಗಿ ಫೌಂಡೇಶನ್ ಹಣ ನೀಡಿತ್ತು. ಇದೀಗ ಕಾಪಿರೈಟ್ಸ್ ಸಂಸ್ಥೆಗೆ ನೀಡದೆ ತಾನೇ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿರುವ ಆರೋಪ ಬಂದಿದೆ. ಆಸ್ಕರ್ ಅಕಾಡೆಮಿ ಅವಾರ್ಡ್ ವಿಭಾಗದಲ್ಲಿ ತಾನೇ ಕಾಪಿರೈಟ್ಸ್ ಮಾಲೀಕ ಎಂದು ಮಾಹಿತಿ ನೀಡಿದ್ದಾರೆ. ಆಯುಷ್ಮಾನ್ ಚಲನಚಿತ್ರ ಪ್ರಶಸ್ತಿಗೂ ಈ ಚಿತ್ರವನ್ನು ಆಯ್ಕೆ ಮಾಡಿಸಿ ಕಾಪಿರೈಟ್ಸ್ ಉಲ್ಲಂಘನೆ ಮಾಡಲಾಗಿದೆ. ಆ ಮೂಲಕ ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್‌ಗೆ ಅರ್ಥಿಕ ನಷ್ಟ ಉಂಟುಮಾಡಲಾಗಿದೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ,

Loading

Leave a Reply

Your email address will not be published. Required fields are marked *