ಬೆಂಗಳೂರು: ನಿನ್ನೆ ಒಡಿಶಾದ ಕಟಕ್ನಲ್ಲಿ ಸಿಸಿಬಿಗೆ ಲಾಕ್ ಹಾಲಶ್ರೀ ಸ್ವಾಮಿಯನ್ನ ಇಂದು ನ್ಯಾಯಾಧೀಶರ ಮುಂದೆ ಸಿಸಿಬಿ ಅಧಿಕಾರಿಗಳು ಹಾಜರು ಪಡಿಸಿದ್ರು.ನ್ಯಾಯಲಯ ಸ್ವಾಮಿಜಿಯನ್ನ ವಿಚಾರಣೆ ಅಗತ್ಯ ಹಿನ್ನೆಲೆ 10ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.ಈ ಮಧ್ಯೆ ಬಳ್ಳಾರಿಯ ಹಾಲಶ್ರೀ ಮಠದಲ್ಲಿ ಸ್ವಾಮಿಜಿ ಗೋವಿಂದ ಪೂಜಾರಿಯಿಂದ ಪಡೆದಿದ್ದ ಹಣ ಇರೋ ಬಗ್ಗೆ ಸಿಸಿಬಿ ಪೊಲೀಸ್ರಿಗೆ ಮಾಹಿತಿ ಸಿಕ್ಕಿದೆ. ಇಗಾಗ್ಲೆ ಹಾಲಶ್ರೀ ಮಠವನ್ನ ಬಳ್ಳಾರಿ ಪೊಲೀಸ್ರು ಸುಪರ್ಧಿಯಲ್ಲಿದ್ದು, ಸ್ವಾಮಿಜಿ ಪಲ್ಲಕ್ಕಿಯಲ್ಲಿ ಸುಮಾರು 1.5ಕೋಟಿ ಹಣ ಇರೋ ಮಾಹಿತಿ ಇದೆ. ಹಣ ಗೋವಿಂದ ಪೂಜಾರಿಗೆ ವಾಪಸ್ ನೀಡಲು ಮಠದಲ್ಲೇ ಹಣವನ್ನ ಭದ್ರವಾಗಿ ಇಟ್ಟಿರೋದಾಗಿ ಸ್ವಾಮಿಜಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರಂತೆ. ಇದೇ ಕಾರಣಕ್ಕೆ ಇಂದು ಸ್ವಾಮಿಜಿಯನ್ನ ಮಠಕ್ಕೆ ಕರೆದೋಯ್ದು ಸ್ಥಳಮಹಜರ್ ಮಾಡಿ ಸಿಸಿಬಿ ಅಧಿಕಾರಿಗಳು ಹಣ ಸೀಜ್ ಮಾಡುವ ಸಾಧ್ಯತೆಯಿದೆ.