ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಲೋನ್ ಪಡೆದು ವಂಚನೆ – ಐವರು ಅರೆಸ್ಟ್

ಬೆಂಗಳೂರು:- ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಲೋನ್ ಪಡೆದಿದ್ದ ಐವರನ್ನು ಅರೆಸ್ಟ್ ಮಾಡಿದ್ದಾರೆ.

ವೃದ್ಧೆಯೊಬ್ಬರ ಮನೆಯ ಮೇಲೆ ಲೋನ್ ಪಡೆದು ಈ ಗ್ಯಾಂಗ್​​ನವರು ವಂಚನೆ ಎಸಗಿದ್ದರು. ವೃದ್ಧೆ ಮನೆ ಮಾರಾಟ ಮಾಡಿ‌ ವಿದೇಶಕ್ಕೆ‌ ತೆರಳಲು ತೀರ್ಮಾನಿದ್ದರು.

ಈ ವಿಚಾರವನ್ನು ಪಕ್ಕದ ಮನೆಯ ನಿವಾಸಿ ಮಂಜುನಾಥ್ ಬಳಿ ಹೇಳಿಕೊಂಡಿದ್ದರು. ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಮಂಜುನಾಥ, ತನ್ನ ಸ್ನೇಹಿತರ ಜೊತೆಗೆ ಸೇರಿ ಲೋನ್ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣದ ತನಿಖೆ ನಡೆಸಿದಾಗ ಬ್ಯಾಂಕ್ ಮ್ಯಾನೇಜರ್ ಗಳ ಯಡವಟ್ಟು ಬಯಲಿಗೆ ಬಂದಿದೆ.

Loading

Leave a Reply

Your email address will not be published. Required fields are marked *