ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದು, ಬಿಜೆಪಿಗೆ ಎಫೆಕ್ಟ್ ಆಯಿತು. ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡದಿದ್ದರೆ ಬಿಜೆಪಿಗೆ ತೊಂದರೆ ಆಗುತ್ತಿರಲಿಲ್ಲ. ಹಾಗಾಗಿ ಜನ ಬಿಜೆಪಿಯನ್ನು ಸೋಲಿಸಿದರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕದ ಲಿಂಗಾಯತ ಜನರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಒಬ್ಬರ ಮಾತು ಕೇಳಿ ಲಿಂಗಾಯತ ನಾಯಕರಿಗೆ ತೊಂದರೆ ಕೊಟ್ಟರು ಜನರು ಇದನ್ನು ಸಹಿಸಲ್ಲ ಎಂದರು.
ಬಿಜೆಪಿಯವರು ನನಗೂ ಅವಮಾನ ಮಾಡಿದ್ರು, ಆದ್ದರಿಂದ ನಾನು ಕೂಡ ಬಿಜೆಪಿಯಿಂದ ಹೊರಕ್ಕೆ ಬಂದೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾದೆ ಎಂದರು. ಪಕ್ಷ ನಿಮ್ಮ ಜೊತೆ ಇರುತ್ತೆ ಅಂತ ಹೇಳಿದ್ದಾರೆ. ಈಗ ಸಿಎಂ ಆಯ್ಕೆ ವಿಚಾರ ನಡೆಯುತ್ತಿದೆ. ಅದು ಮುಗಿದ ಸಚಿವ ಸ್ಥಾನದ ಬಗ್ಗೆ ನಿರ್ಧರಿಸುತ್ತಾರೆ. ಕಾದು ನೋಡೋಣ ಎಂದರು.ಬಿ.ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದು, ಬಿಜೆಪಿಗೆ ಎಫೆಕ್ಟ್ ಆಯಿತು. ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡದಿದ್ದರೆ ಬಿಜೆಪಿಗೆ ತೊಂದರೆ ಆಗುತ್ತಿರಲಿಲ್ಲ. ಹಾಗಾಗಿ ಜನ ಬಿಜೆಪಿಯನ್ನು ಸೋಲಿಸಿದರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.