ಬೆಂಗಳೂರು: ಕಾವೇರಿ ನದಿ ನೀರಿ ಹಂಚಿಕೆ ವಿಚಾರದಲ್ಲಿ ಈ ರೀತಿಯಾಗಿ ಯಾವ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ ಆಗಾಗಾ ತನ್ನ ನಿರ್ಧಾರ ಬದಲಾವಣೆ ಮಾಡಿಕೊಳ್ತಿದೆ ಇದೊಂದು ಊಸರವಳ್ಳಿ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದೆದುರು ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಈ ರೀತಿಯಾಗಿ ಯಾವ ಸರ್ಕಾರ ನಡೆದುಕೊಂಡಿಲ್ಲ ಈ ವಿಚಾರದಲ್ಲಿ ಪ್ರಧಾನಿ ಎಂಟ್ರಿಯಾಗುವ ಪ್ರಶ್ನೆಯೇ ಇಲ್ಲಯಾಕೆಂದರೆ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಇದೆತಮ್ಮ ತಪ್ಪು ಮುಚ್ಚಿಕೊಳ್ಳಲು ಈ ರೀತಿಯ ಹೇಳಿಕೆ ಕೊಡ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಹಾಗೆ ಈ ಸರ್ಕಾರಕ್ಕೆ ನಿಜವಾದ ತಾಖತ್ ಧಮ್ ಇದ್ರೆ ನೀರು ಬಿಡ್ತಿರಲಿಲ್ಲ ತಾಖತ್ ಧಮ್ ಇದ್ರೆ ಸುಪ್ರೀಂಕೋರ್ಟ್ ಮುಂದೆ ನೀರು ಬೀಡಲ್ಲ ಎಂಬ ವಾದ ಮಾಡಿಸಲಿ ಹಾಗೆ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಿದಿದ್ದು ರಾಜ್ಯ ಸರ್ಕಾರ ಎಂದು ಹೇಳಿದರು.