ಬೆಂಗಳೂರು: ಕುಡಿದ ಅಮಲಿನಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮಗನಿಗೆ ಗನ್ ಮ್ಯಾನ್ ಆಗಿದ್ದವನಿಂದ ಫೈರಿಂಗ್ ಮಾಡಲಾಗಿದೆ. ಚಂದ್ರಬಾಬು ನಾಯ್ಡು ಮಗ ನಾರಾ ಲೊಕೇಶ್ ಗನ್ ಮ್ಯಾನ್ ಆಗಿದ್ದ ಪ್ರಶಾಂತ್ ಎಂಬುವವನಿಂದ ಈ ಕೃತ್ಯ ನಡೆದಿದ್ದು, 25 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ, ಸದ್ಯ ಈಗ ಕಾಂಗ್ರೆಸ್ ಮುಖಂಡ ಉಮಾಪತಿ ಗೌಡ ಅವರ ಸಹೋದರನ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಎಂಬ ಗನ್ ಮ್ಯಾನ್ ಕುಡಿದ ಅಮಲಿನಲ್ಲಿ ಅನಿಲ್ ಕುಮಾರ್ ಎಂಬ ಮತ್ತೊಬ್ಬ ಗನ್ ಮ್ಯಾನ್ ಮೇಲೆಯೇ ಗುಂಡು ಹಾರಿಸಿದ್ದಾರೆ. ಕುಡಿದ ಅಮಲಿನಲ್ಲಿ ಪಿಸ್ತೂಲ್ನಿಂದ ಫೈರ್ ಮಾಡಿದ್ದಾರೆ. ಅದೃಷ್ಟವಶಾತ್ ಅನಿಲ್ ಕುಮಾರ್ ಕೂದಲೆಳೆ ಅಂತರದಲ್ಲಿ ಸೇಫ್ ಆಗಿದ್ದಾರೆ. ಗುಂಡು ಅನಿಲ್ ಸಮೀಪಿಸಿ ಪಾಸ್ ಆಗಿದೆ.
ಆಗಷ್ಟ್ 28 ರ ರಾತ್ರಿ 7:30 ರ ಸುಮಾರಿಗೆ ಬೆಂಗಳೂರಿನ ತಿಲಕ್ ನಗರದ ರೆಸಿಡೆನ್ಸಿಯಲ್ ಲೀವಿಂಗ್ ಪಿಜಿಯಲ್ಲಿ ಕುಡಿದ ಅಮಲಿನಲ್ಲಿದ್ದ ಗನ್ ಮ್ಯಾನ್ ಪ್ರಶಾಂತ್ ಅವರು, ಮತ್ತೊಬ್ಬ ಗನ್ ಮ್ಯಾನ್ ಅನಿಲ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಪಿಜಿಯಲ್ಲಿ ನಡೆದ ಘಟನೆ ಬಗ್ಗೆ ಅನಿಲ್ ಅವರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಆಧಾರ ಮೇಲೆ ಫೈರಿಂಗ್ ಮಾಡಿದ್ದ ಪ್ರಶಾಂತ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಕಳಿಸಿದ್ದಾರೆ.
ಗನ್ ಮ್ಯಾನ್ ಪ್ರಶಾಂತ್, 25 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 2015ರಲ್ಲಿ ನಿವೃತ್ತಿಯಾಗಿ ವಾಪಸ್ಸಾಗಿದ್ದರು. ನಂತರ ವಿವಿಐಪಿಗಳಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಗ ನಾ.ರಾ ಲೋಕೇಶ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಟಿಡಿಪಿ ಪಕ್ಷದ ಹಾಲಿ ಯುವ ನಾಯಕ ನಾರಾ ಲೋಕೇಶ್ ಅವರಿಗೆ ಗನ್ ಮ್ಯಾನ್ ಆಗಿದ್ದರು. ನಂತರ ಈಗ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ, ನಿರ್ಮಾಪಕ ಉಮಾಪತಿ ಗೌಡ ಸಹೋದರ ದೀಪಕ್ ಗೌಡರಿಗೆ ಗನ್ ಮ್ಯಾನ್ ಆಗಿದ್ದಾರೆ.