ಜಸ್ಟಿನ್ ಟ್ರೂಡೊ ಆಡಳಿತದಲ್ಲಿ ವಿದೇಶಾಂಗ ಬಾಂಧವ್ಯ ಕೂಡಾ ಹಾಳಾಗಿದೆ: ಪೆರ್ರಿ ಪೊಲಿವಿಯರ್

ಕೆನಡಾ: ಭಾರತ ದೇಶದ ಜೊತೆ ರಾಜತಾಂತ್ರಿಕ ಸಮರ ನಡೆಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರನ್ನು ಭಾರತದ ನಾಯಕರು ನಗೆಪಾಟಲಿನ ವಸ್ತುವಾಗಿ ಪರಿಗಣಿಸಿದ್ದಾರೆ ಎಂದು ಕೆನಡಾದ ಪ್ರಮುಖ ವಿರೋಧ ಪಕ್ಷ ಕನ್ಸರ್ವೇಟಿವ್ ಪಕ್ಷ ಕಿಡಿ ಕಾರಿದೆ. ಅಷ್ಟೇ ಅಲ್ಲ, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಸುದೀರ್ಘ 8 ವರ್ಷಗಳ ಕಾಲ ಆಡಳಿತ ನಡೆಸಲು ಯೋಗ್ಯರಲ್ಲ ಎಂದು ಹೇಳದೆ.

ಕೆನಡಾದ ಕನ್ಸರ್ವೇಟಿವ್ ಪಕ್ಷದ ನಾಯಕ ಪೆರ್ರಿ ಪೊಲಿವಿಯರ್ ಅವರು ಕೆನಡಾದ ಪ್ರಧಾನ ಮಂತ್ರಿ ಅಭ್ಯರ್ಥಿ ರೇಸ್ನಲ್ಲಿ ಇದ್ದಾರೆ. 2025ಕ್ಕೆ ಕೆನಡಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಕೆನಡಾದ ಜನರು ತಮ್ಮ ದೇಶದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಪ್ರಶ್ನೆಗೆ ಪೆರ್ರಿ ಪೊಲಿವಿಯರ್ ಸೂಕ್ತ ವ್ಯಕ್ತಿ ಎಂದು ಸಮೀಕ್ಷೆಯಲ್ಲಿ ಬಹುಮತ ನೀಡಿದ್ದಾರೆ. ಇದೀಗ ಇದೇ ಪೆರ್ರಿ ಪೊಲಿವಿಯರ್, ಕೆನಡಾ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ. ಜೊತೆಯಲ್ಲೇ ತಾವು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರೆ ಭಾರತದ ಜೊತೆ ವೃತ್ತಿಪರ ಬಾಂಧವ್ಯ ಹೊಂದುವುದಾಗಿ ದೇಶದ ಜನತೆಗೆ ಭರವಸೆಯನ್ನೂ ನೀಡಿದ್ಧಾರೆ.
ಈ ಕುರಿತಾಗಿ ಟೊರಾಂಟೋದ ನಮಸ್ತೆ ರೇಡಿಯೋಗೆ ಸಂದರ್ಶನ ನೀಡಿರುವ ಪೆರ್ರಿ ಪೊಲಿವಿಯರ್, ಕೆನಡಾ ಹಾಗೂ ಭಾರತ ನಡುವಣ ಕಹಿ ಬಾಂಧವ್ಯದ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ 8 ವರ್ಷಗಳ ಅವಧಿಗೆ ಕೆನಡಾ ಪ್ರಧಾನಿಯಾಗಿ ಜಸ್ಟಿನ್ ಟ್ರೂಡೊ ಮುಂದುವರೆಯೋದು ಏಕೆ ಬೇಡ ಅನ್ನೋದಕ್ಕೆ ಇದೂ ಒಂದು ಕಾರಣ ಎಂದು ಅವರು ಹೇಳಿದ್ದಾರೆ. ಜಸ್ಟಿನ್ ಟ್ರೂಡೊ ಆಡಳಿತದಲ್ಲಿ ಕೆನಡಾ ಜನತೆ ಪರಸ್ಪರ ದ್ವೇಷ ಸಾಧಿಸುವಂತಾಗಿದೆ. ಅಷ್ಟೇ ಅಲ್ಲ, ವಿದೇಶಾಂಗ ಬಾಂಧವ್ಯ ಕೂಡಾ ಹಾಳಾಗಿದೆ ಎಂದು ಪೆರ್ರಿ ಪೊಲಿವಿಯರ್ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *