ಜಮೀನಿಗೆ ತೆರಳುವ ದಾರಿಗೆ ಅನ್ಯಭೂಮಾಲೀಕರು ಇನ್ಮುಂದೆ ಅಡ್ಡಿಪಡಿಸುವಂತಿಲ್ಲ!

ರೈತರ ಜಮೀನಿಗೆ ತೆರಳುವ ದಾರಿಗೆ ಅನ್ಯಭೂಮಾಲೀಕರು ಇನ್ನುಮುಂದೆ ಅಡ್ಡಿಪಡಿಸುವಂತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯಾದ್ಯಂತ ರೈತರಿಂದ ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿಯ ಸಮಸ್ಯೆ ಇದೆ.

ಇದರಿಂದ ರೈತರಿಗೆ ತೊಂದರೆಗಳಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು.

ಸರ್ಕಾರಕ್ಕೆ ಬಂದ ದೂರುಗಳು

ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಮಾಡಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವುದು ಸಾರ್ವಜನಿಕರಿಂದ ಮನವಿ/ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ

ರಿಜಿಸ್ಟರ್‌ನಲ್ಲಿ ನಮೂದಿಗೂ ಅವಕಾಶ

ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ ದಾರಿಯ ಹಕ್ಕುಗಳು ಮತ್ತು ಇತರ, ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟರ್‌ನಲ್ಲಿ ನಮೂದು ಮಾಡಲು ಅವಕಾಶವಿದೆ. The Indian Easement Act, 1882 ರಂತೆ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಹೊಂದಿದ್ದು, ಇದಕ್ಕೆ ಅನ್ಯಭೂಮಾಲೀಕರಿಂದ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ

Loading

Leave a Reply

Your email address will not be published. Required fields are marked *