ಬೆಂಗಳೂರು: ಟ್ರೇಡ್ ಲೈಸೆನ್ಸ್ಗಾಗಿ ಲಂಚ ಪಡೆಯುತ್ತಿದ್ದ ಆಹಾರ ನಿರೀಕ್ಷಕ ಮಹಾಂತೇಗೌಡ ಅವರನ್ನು ಲೋಕಾಯುಕ್ತ ಪೊಲೀಸರು 15 ಕಿ.ಮೀ. ಚೇಸ್ ಮಾಡಿ ಸಿನಿಮೀಯ ರೀತಿಯಲ್ಲಿ ಹಿಡಿದಿದ್ದಾರೆ. ಕೆ.ಜಿ.ಸರ್ಕಲ್ ಬಳಿ ಇರುವ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ನಿರೀಕ್ಷಕ ಆಗಿರುವ ಮಹಾಂತೇಗೌಡ ಅವರು ರಂಗದಾಮಯ್ಯ ಬಳಿ 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ 43 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ಪರಿಯಾಗಿದ್ದಾರೆ. ಬೆನ್ನಟ್ಟಿದ ಲೋಕಾಯುಕ್ತ ಪೊಲೀಸರು 15 ಕಿಮೀ ದೂರದವರೆಗೆ ಚೇಸ್ ಮಾಡಿ ಸೆರೆಹಿಡಿದಿದ್ದಾರೆ.
ಹೀಗಾಗಿ 43 ಸಾವಿರ ಹಣವನ್ನು ಪಡೆಯುವಾಗ ಲೋಕಾಯುಕ್ತ ಟೀಂ ಟ್ರ್ಯಾಪ್ ಮಾಡೋದಕ್ಕೆ ತೆರಳಿದೆ. ಆಗ ಲೋಕಾಯುಕ್ತ ಟ್ರ್ಯಾಪ್ ಇದು ಎಂದು ಗೊತ್ತಾಗಿ ಎಸ್ಕೇಪ್ ಆಗಲು ಮಹಂತೇಗೌಡ ಯತ್ನಿಸಿದ್ದಾನೆ. ಸುಮಾರು 15 ಕಿ.ಲೋ ಮೀಟರ್ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಕೊನೆಗೂ ಹಿಡಿದಿದ್ದಾರೆ. ನೆಲಮಂಗಲ ಬಳಿಯ ಸೊಂಡೇಕೊಪ್ಪ ಬಳಿ ಫುಡ್ ಇನ್ಸ್ಪೆಕ್ಟರ್ ತಗಲಾಕಿಕೊಂಡಿದ್ಗು, ಈಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾನೆ.