ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ(Yeshwantpur Vidhan Sabha) ರಾಮೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಪ್ರಭಾರ ಅಧ್ಯಕ್ಷರಾಗಿ(Chairman-in-charge) ರವಿ ಕುಮಾರ್ʼರವರು(Ravi Kumar) ಆಯ್ಕೆಯಾಗಿದ್ದಾರೆ ಇಂದು ಅಧ್ಯಕ್ಷರ ಕಚೇರಿ ಪೂಜಾ ಸಮಾರಂಭವನ್ನು ಏರ್ಪಡಿಸಲಾಗಿತ್ತು ಈ ಸಮಾರಂಭದಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಬಿಜೆಪಿ (bjp)ಮುಖಂಡರು ಸ್ನೇಹಿತರು ಹಿತೈಷಿಗಳು ಬಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾರ ಅಧ್ಯಕ್ಷರಾದ ರವಿ ಕುಮಾರ್ ರವರು ನನಗೆ ಈ ಸ್ಥಾನಮಾನ ಕಲ್ಪಿಸಿಕೊಟ್ಟ ಮಾಜಿ ಸಚಿವರು ಹಾಗೂ ಶಾಸಕರಾದ ಎಸ್ ಟಿ ಸೋಮಶೇಖರ್ ಅವರಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದರು. ಹಾಗೂ ಎಲ್ಲ ಸದಸ್ಯರುಗಳು ಬೆಂಬಲ ನೀಡಿದ್ದು ಅವರಿಗೆ ಸ್ನೇಹಪೂರ್ವಕ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಕುಮಾರ್ ಅವರು ನನಗೆ ನೀಡಿರುವ ಅಲ್ಪ ಅವಧಿಯಲ್ಲಿ ಸರ್ಕಾರಿ ಇಂದ ಬರುವ ಸಕಲ ಸವಲತ್ತುಗಳನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸುತ್ತೇನೆ ಹಾಗೂ ಕುಡಿಯುವ ನೀರು ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು ಯುಜಿಡಿ ಕೆಲಸವನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.