2007ರ ಟಿ20 ವಿಶ್ವಕಪ್ ಸ್ಟಾರ್ ಜೋಗಿಂದರ್ ಶರ್ಮಾ‌ ವಿರುದ್ಧ FIR..!

2007ರ ಟಿ20 ವಿಶ್ವಕಪ್‌ನ ಈ ಸ್ಟಾರ್ ಆಟಗಾರ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಜೋಗಿಂದರ್ ಶರ್ಮಾ ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿದ್ದಾರೆ. ಇದೀಗ ಹಿಸಾರ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರೊಂದಿಗೆ ಇತರ 6 ಜನರ ಹೆಸರುಗಳೂ ಈ ಪ್ರಕರಣದಲ್ಲಿ ಕೇಳಿಬಂದಿವೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿರುವ ಜೋಂಗಿದರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಜೋಗಿಂದರ್ ವಿರುದ್ಧ ಹಿಸ್ಸಾರ್ ಜಿಲ್ಲೆಯ ದಬ್ಡಾ ಗ್ರಾಮದ ನಿವಾಸಿಯೊಬ್ಬರ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಕೇಳಿಬಂದಿದೆ. ಮಾಹಿತಿ ಪ್ರಕಾರ, ಜನವರಿ 1 ರಂದು, ಹಿಸ್ಸಾರ್ ಜಿಲ್ಲೆಯ ದಬ್ಡಾ ಗ್ರಾಮದ ನಿವಾಸಿಯೊಬ್ಬ ಆಸ್ತಿ ವಿವಾದದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಮೃತರ ಕುಟುಂಬಸ್ಥರು 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಅದರಲ್ಲಿ ಜೋಗಿಂದರ್ ಶರ್ಮಾ ಅವರ ಹೆಸರೂ ಸಹ ಸೇರಿದೆ.

ಹರಿಯಾಣ ಪೊಲೀಸರು ಜೋಗಿಂದರ್ ಶರ್ಮಾ ಮತ್ತು ಇತರ 6 ಜನರ ವಿರುದ್ಧ ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ-ಎಸ್‌ಟಿ ವಿಭಾಗದಡಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆಯೂ ಸಹ ಆರೋಪಿಗಳೆಲ್ಲರೂ ತನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದರು. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಮತ್ತೊಮ್ಮೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *