ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚೆಗೆ ಲಿಯೋ ಸಿನಿಮಾದ ಪೋಸ್ಟರ್ ಹಾಗೂ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಬಿಡುಗಡೆ ಆಗಿರುವ ಹಾಡಿನ ವಿರುದ್ಧ ದೂರು ದಾಖಲಾಗಿದೆ.
ವಿಜಯ್ ಹುಟ್ಟುಹಬ್ಬದಂದು ಬಿಡುಗಡೆ ಆಗಿರುವ ‘ನಾ ರೆಡಿದಾ ವರವಾ’ ಎಂಬ ಹಾಡು ಇದೀಗ ವಿವಾದಕ್ಕೂ ಕಾರಣವಾಗಿದೆ.
ಈ ಹಾಡಿನಲ್ಲಿ ಡ್ರಗ್ಸ್ ಪ್ರಚೋದಿಸುವಂತಹ ಸನ್ನಿವೇಶಗಳು ಇವೆಯಂತೆ. ಇದೇ ಕಾರಣಕ್ಕಾಗಿ ಈ ಹಾಡಿನ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಸೆಲ್ವಂ ಅನ್ನುವವರು ದೂರು ನೀಡಿದ್ದು, ಮಾದಕ ಕ್ರಮ ನಿಯಂತ್ರಣ ತಡೆ ಕಾಯ್ದೆ ಅನ್ವಯ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಷ್ಣು ಎಡವನ್ ಬರೆದಿರುವ ನಾ ರೆಡಿದಾ ವರವಾ ಹಾಡಿಗೆ ವಿಜಯ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಡಿದ್ದ, ವಿಜಯ್ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಿಲಿಯನ್ಗಳಿಗೂ ಹೆಚ್ಚು ವೀಕ್ಷಣೆ ಕಂಡಿದ್ದು ಇದೀಗ ಇದೇ ಹಾಡಿನ ವಿರುದ್ಧ ದೂರು ದಾಖಲಾಗಿರುವ ವಿಜಯ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.