ಹುಬ್ಬಳ್ಳಿ : ಹಣದ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿ ನಗರದ ಗೋಪನಕೊಪ್ಪದ ಹರಿಜನಕೇರಿಯಲ್ಲಿ ನಡೆದಿದೆ. ಹೌದು ಹಣದ ವಿಚಾರವಾಗಿ ಮಗ ತಂದೆಗೆ ಚಾಕುವಿನಿಂದ ಇರಿದಿದ್ದು, ಪ್ರಕರಣ ಸಂಬಂಧ ಆರೋಪಿ ಉಮೇಶನನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ ಹೊಸಮನಿ ಚಾಕು ಇರಿತಕ್ಕೆ ಒಳಗಾದವರು. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಲ ತೀರಿಸಲು ₹3 ಲಕ್ಷ ಕೊಡಿಸುವಂತೆ ಆರೋಪಿ ಉಮೇಶ ತನ್ನ ತಾಯಿ ರೇಣುಕಾ ಹೊಸಮನಿ ಅವರನ್ನು ಪೀಡಿಸಿದ್ದಾನೆ. ಬಳಿಕ ತಂದೆಯೊಂದಿಗೂ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.