ಗರ್ಭದಲ್ಲಿಗಾಗಲೇ ಭ್ರೂಣಹತ್ಯೆ – ಪ್ರಿಯಕರನ ವಿರುದ್ಧ ದೂರು ದಾಖಲಿಸಿದ ಯುವತಿ

ಬೆಂಗಳೂರು:- ಬೆಂಗಳೂರು ಪೊಲೀಸರಿಗೆ ಯುವತಿಯೊಬ್ಬಳು ದೂರು ನೀಡಿದ್ದು, ಗರ್ಭದಲ್ಲಿ ಬೆಳೆಯುತ್ತಿದ್ದ ಭ್ರೂಣ ಹತ್ಯೆ ಮಾಡಿದ ಪ್ರಿಯಕರನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡಿದ್ದಾರೆ. ಫೇಸ್​ಬುಕ್ ಮೂಲಕ ಹಾಸನ ಜಿಲ್ಲಾ ಪೊಲೀಸರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಯುವತಿ ದೂರು ನೀಡಿದ್ದಾಳೆ.

ಬಾಲಕೃಷ್ಣ ಸುನೀಲ್ ಎಂಬಾತ ತನ್ನನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸಿ ಅವನ ಕಾಮದ ಆಸೆಗಾಗಿ ನನ್ನನ್ನು ತಾಯಿಯನ್ನಾಗಿ ಮಾಡಿ ಭ್ರೂಣ ಹತ್ಯೆಯನ್ನೂ ಮಾಡಿಸಿದ್ದಾಣೆ. ಇದರ ಜೊತೆಗೆ ತನ್ನಲ್ಲಿದ್ದ ಹಣವನ್ನೂ ದೋಚಿದ್ದಾನೆ. ಬೆಂಗಳೂರಿನಲ್ಲಿ ಗಂಡ ಹೆಂಡತಿಯರಂತೆ ಒಟ್ಟಿಗೆ ಇದ್ದೆವು. ಇದೀಗ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿಕೊಂಡು ಹಾಸನದ ಸಕಲೇಶಪುರದ ಅಗಲಟ್ಟಿ ಎಂಬ ಊರಿನಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದು, ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.

Loading

Leave a Reply

Your email address will not be published. Required fields are marked *