ಉತ್ತರ ಪ್ರದೇಶ: ಪಿಕಪ್ ಮತ್ತು ಟ್ರಕ್ ನಡುವೆ ಸಂಭಿವಿಸಿದ ಭೀಕರ ಅಪಘಾತದಲ್ಲಿ (Accident) 8 ಮಂದಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ (Moradabad) ನಡೆದಿದೆ.
ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ 7 ಜನರನ್ನು ಕಾಸ್ಮೋಸ್ ಆಸ್ಪತ್ರೆಗೆ ಮತ್ತು 3 ಜನರನ್ನು ಫೋಟಾನ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆಡಳಿತ ಮತ್ತು ಪೊಲೀಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೊರಾದಾಬಾದ್ ಸಿಡಿಒ ಸುಮಿತ್ ಯಾದವ್ ಹೇಳಿದ್ದಾರೆ.
ದಲಪತ್‌ಪುರ ಕಡೆಯಿಂದ ಅತಿವೇಗದಲ್ಲಿ ಬರುತ್ತಿದ್ದ ಕ್ಯಾಂಟರ್‌ನ ಚಾಲಕ ಮಧ್ಯಾಹ್ನ 1.30ರ ಸುಮಾರಿಗೆ ದಲತ್‌ಪುರ-ಕಾಶಿರಾಂ ರಸ್ತೆಯ ಖೈರ್‌ಖಾತಾ ಗ್ರಾಮದ ಬಳಿ ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಟಾಟಾ ಮ್ಯಾಜಿಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ವಾಹನಗಳು ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿದೆ.ಮೃತರನ್ನು ಆಸಿಫಾ (40), ಹನೀಫಾ (42), ದಾನಿಯಾ (14), ಬಿಲಾಲ್ (3), ಜುಬೇರ್ (45), ಮುನಿಜಾ (18), ಹುಕುಮತ್ (60), ಮುಶ್ರಾ (25), ಬುಶ್ರಾ (7) ಎಂದು ಗುರುತಿಸಲಾಗಿದ್ದು, ಎಲ್ಲರೂ ಕರೇವಾಕು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ.