ಬೆಂಗಳೂರು ;- ಬಿಗ್ ಬಾಸ್ ಸೀಸನ್-7 ನಿಂದ ಖ್ಯಾತಿ ಪಡೆದ ಖ್ಯಾತ ನಿರೂಪಕಿ ಚೈತ್ರ ವಾಸುದೇವನ್ ಅವರು ಪತಿ ಸತ್ಯ ನಾಯ್ಡುಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಚೈತ್ರ ಮಾಹಿತಿ ನೀಡಿದ್ದಾರೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ.
ದ್ವೇಷಿಸಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ. ಟಿವಿ ಮಾಧ್ಯಮದಲ್ಲಿ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಇನ್ಮುಂದೆಯೂ ಮುಂದುವರೆಸಲು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಕಾಯುತ್ತೇನೆ ಎಂದು ಚೈತ್ರ ವಾಸುದೇವನ್ ನೋವಿನ ಸಾಲುಗಳನ್ನು ಇನ್ಸ್ಟಾ ದಲ್ಲಿ ಪೋಸ್ಟ್ ಮಾಡಿದ್ದಾರೆ.